ಹಾಂಗ್ ಕಾಂಗ್:
ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾದ ನಂತರ ಏರ್ ಇಂಡಿಯಾ ವಿಮಾನಗಳನ್ನು ಹಾಂಗ್ ಕಾಂಗ್ ಸರ್ಕಾರ ಭಾನುವಾರ ನಿರ್ಬಂಧಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.ಪ್ರಯಾಣಿಕರಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ನಂತರ ಏರ್ ಇಂಡಿಯಾ ಮತ್ತು ಕ್ಯಾಥೆ ಡ್ರ್ಯಾಗನ್ ವಿಮಾನಗಳನ್ನು ಅಕ್ಟೋಬರ್ 3ರವರೆಗೂ ನಿರ್ಬಂಧಿಸಲಾಗಿದೆ ಎಂದು ಹಾಂಗ್ ಕಾಂಗ್ ಆರೋಗ್ಯ ಇಲಾಖೆ ಹೇಳಿರುವುದಾಗಿ ಅನೇಕ ಸ್ಥಳೀಯ ಮಾಧ್ಯಮಗಳು ಹೇಳಿವೆ.
ಸೆಪ್ಟೆಂಬರ್ 18 ರಂದು ಕೌಲಲಾಂಪುರ ಮತ್ತು ಹಾಂಗ್ ಕಾಂಗ್ ನಡುವಣ ಸಂಚರಿಸುತ್ತಿದ್ದ ಕ್ಯಾಥೆ ಡ್ರಾಗನ್ ವಿಮಾನದಲ್ಲಿ ಸಂಚರಿಸುತ್ತಿದ್ದ ಐವರು ಭಾರತೀಯ ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ ಎಂದು ಕ್ಯಾಥೆ ಫೆಸಿಪಿಕ್ ಹೇಳಿಕೆಯಲ್ಲಿ ತಿಳಿಸಿದೆ.
ಸುಮಾರು ಒಂದು ತಿಂಗಳಲ್ಲಿ ಹಾಂಗ್ ಕಾಂಗ್ ನಲ್ಲಿ ಅತಿ ಹೆಚ್ಚು ಹೊಸ ಸೋಂಕು ಪ್ರಕರಣಗಳು ಕಂಡುಬಂದಿವೆ. ಹೊಸ 23 ಪ್ರಕರಣಗಳಲ್ಲಿ ಮೂರನೇ ಒಂದು ಭಾಗವು ಇತ್ತೀಚೆಗೆ ಭಾರತದಿಂದ ಪ್ರಯಾಣಿಸಿದ ಜನರಲ್ಲಿದೆ ಎಂದು ಆರೋಗ್ಯ ಸಂರಕ್ಷಣಾ ಕೇಂದ್ರ ತಿಳಿಸಿದೆ. ಆಗಸ್ಟ್‌ನಲ್ಲೂ ಏರ್ ಇಂಡಿಯಾ ನಿರ್ವಹಿಸುವ ವಿಮಾನಗಳನ್ನು ಹಾಂಗ್ ಕಾಂಗ್ ನಿಷೇಧಿಸಿತ್ತು. ಈ ವಿಮಾನಗಳು ವಂದೇ ಭಾರತ್ ಮಿಷನ್‌ನ ಭಾಗವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ