ಯಾವ ದೇಶದಲ್ಲಿ ಏನನ್ನು ಖರೀದಿಸಬೇಕು ಎಂದು ನಮಗೆ ಗೊತ್ತಿದೆ..!

ವಾಷಿಂಗ್ಟನ್:

      ನಾವು ಯಾರ ಬಳಿ ಯಾವ ವಸ್ತು ಖರೀದಿಸಬೇಕು ಎನ್ನುವ ಅರಿವು ನಮಗಿದೆ ಈ ವಿಷಯದಲ್ಲಿ ಅಮೆರಿಕದ ಸಲಹೆ ಸೂಚನೆಗಳ ಅಗತ್ಯ ನಮಗಿಲ್ಲ ಎಂದು ಎಸ್ ಜೈ ಶಂಕರ್ ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.

    ಭಾರತ ರಷ್ಯಾದಿಂದ  ಖರೀಧಿಸಲು ಉದ್ದೇಶಿಸಿರುವ ರಕ್ಷಣಾ ಸಾಧನಗಳ ಬಗ್ಗೆ ಜಾಗತಿಕವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಅಮೆರಿಕ ಭಾರತದ ಮೇಲೆ ನಿರ್ಬಂಧ ಹೇರುವ ಕುರಿತು ನೀಡಿರುವ ಹೇಳಿಕೆ ಖಂಡನೀಯವಾಗಿದೆ ಎಂದು ಜೈಶಂಕರ್ ಉತ್ತರಿಸಿದ್ದಾರೆ.

    ವಿಶ್ವಸಂಸ್ಥೆ ಸಾಮಾನ್ಯ ಸಭೆ ಮುಕ್ತಾಯವಾದ ಬಳಿಕ ವಾಷಿಂಗ್ಟನ್ ಡಿ.ಸಿಗೆ ತೆರಳಿದ ಸಚಿವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಅರಿವು ಮತ್ತು  ಹಕ್ಕು ಭಾರತಕ್ಕಿದೆ ಇದರಲ್ಲಿ ಯಾರ ಸಲಹೆ ಅಗತ್ಯವಿಲ್ಲಾ ಎಂದು ತಿಳಿಸಿದ್ದಾರೆ. 

    ‘ಮಿಲಿಟರಿ ಸಲಕರಣೆಗಳನ್ನು ಖರೀದಿಸುವುದು ಯಾವುದೇ ದೇಶದ ಮೂಲಭೂತ ಹಕ್ಕು. ರಷ್ಯಾದಿಂದ ಏನನ್ನು ಖರೀದಿಸಬೇಕು? ಏನನ್ನು ಖರೀದಿಸಬಾರದು? ಎಂಬ ಕುರಿತು ಯಾವುದೇ ದೇಶ ಭಾರತಕ್ಕೆ ತಿಳಿ ಹೇಳುವುದನ್ನು ನಾವು ಇಷ್ಟಪಡುವುದಿಲ್ಲ. ಅದೇ ರೀತಿ ಅಮೆರಿಕದಿಂದಲೂ ಏನನ್ನು ಖರೀಸಬೇಕು? ಎಂದು ನಾವೇ ನಿರ್ಧರಿಸುತ್ತೇವೆ. ಆ ಆಯ್ಕೆಯ ಸ್ವಾತಂತ್ರ್ಯ ನಮ್ಮದು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ವಿಚಾರವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ನೇರವಾಗಿಯೇ ದೊಡ್ಡಣ್ಣಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link