ಮತ್ತೆ ಕಾಶ್ಮೀರದ ಖ್ಯಾತೆ ತೆಗೆದ ಪಾಕಿಸ್ತಾನ
ಯುನೈಟೆಡ್ ನೇಷನ್ಸ್: 
ಶತ್ರು ದೇಶವಾದರು ಕಷ್ಟದಲ್ಲಿದೆ ಎಂದು ಅನುಕಂಪ ತೋರಿದ್ದಕ್ಕೆ ಪಾಕಿಸ್ಥಾನ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಎತ್ತಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಲ್ಲದೆ ಪಾಕಿಸ್ಥಾನ ಸಂಕುಚಿತ ರಾಜಕೀಯ ಲಾಭ ಪಡೆದುಕೊಳ್ಳಲು ಯಾವುದೇ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಅಭ್ಯಾಸವಾಗಿದೆ ಡಂದು ಭಾರತದ ರಾಯಭಾರಿ ಖಾರವಾಗಿ ಟೀಕಿಸಿದ್ದಾರೆ.
ರಾಷ್ಟ್ರದ ಸಮಗ್ರತೆಯನ್ನು ದುರ್ಬಲಗೊಳಿಸಲು ಸ್ವ ನಿರ್ಣಯದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಮೊದಲ ಕಾರ್ಯದರ್ಶಿ ಪಲೋಮಿ ತ್ರಿಪಾಠಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮಲೀಹಾ ಲೊದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು. ಸ್ವನಿರ್ಣಯದ ಹುಕ್ಕುಗಳಿಗೆ ಕಾಶ್ಮೀರಿ ಜನತೆಯ ಹೋರಾಟವನ್ನು ದಶಕಗಳಿಂದ ಹತ್ತಿಕ್ಕಲಾಗುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಗರಂ ಆಗಿದ್ದಾರೆ.
