ಕಾಬೂಲ್
ಅಫ್ಘಾನಿಸ್ತಾನದ ಪಶ್ಚಿಮ ಬಾದ್ಗಿಶ್ ಪ್ರಾಂತ್ಯದ ರಕ್ಷಣಾ ಹೊರ ಠಾಣೆಗಳ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 24 ಅಫ್ಘಾನ್ ಸೇನಾ ಯೋಧರು ಸಾವನ್ನಪ್ಪಿ, ಇತರ 11 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂರಾರು ಶಸ್ತ್ರಸಜ್ಜಿತ ಉಗ್ರರು, ಬಾಲ ಮುರ್ಗಾಬ್ ಜಿಲ್ಲೆಯ ಜರ್ ಇ ಆಸಿಯಾದ ಭದ್ರತಾ ಪಡೆಗಳ ಚೌಕಿಗಳ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದರು. ಸುಮಾರು 5 ಗಂಟೆಗಳ ಕಾಲ ಕಾಳಗ ನಡೆದ ಬಳಿಕ ಈ ಸಾವು ನೋವು ಸಂಭವಿಸಿದೆ ಎಂದು ಜಿಲ್ಲಾ ಮುಖ್ಯಸ್ಥ ಫಾಝಿಲ್ ಸಿದ್ದೀಕ್ ಸಿದ್ದೀಕಿ ತಿಳಿಸಿದ್ದಾರೆ.ಗಾಯಗೊಂಡವರನ್ನು ಸೇನಾ ಕ್ಯಾಂಪ್ಗೆ ಸ್ಥಳಾಂತರಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.