ಮೊಹಗೇನ್ ಲೇಕ್:
ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ .ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹಲವಾರು ವಾರಗಳ ಕಾಲ ಜ್ವರದಿಂದ ಬಳಲಿದ್ದ ಮಹಿಳೆ ಕ್ಯಾನ್ಸರ್ ವಿರುದ್ಧವೂ ಹೋರಾಡಿದ್ದಳು.ಏಪ್ರಿಲ್ 20 ರಂದು ನಡೆಸಿದ ಟೆಸ್ಟ್ ನಲ್ಲಿ ಕೊರೋನಾ ನೆಗೆಟಿವ್ ಕಂಡು ಬಂದಿದೆ. ನನ್ನ ತಾಯಿಯದ್ದು ಸೂಪರ್ ಹ್ಯೂಮನ್ ಡಿಎನ್ ಎ ಎಂದು ಏಂಜಲಿನಾ ಪುತ್ರಿ ಹೇಳಿದ್ದಾಳೆ.ಏಂಜಲಿನಾ ಫ್ರೀಡ್ಮನ್ 1918 ರಲ್ಲಿ ಇಟಲಿಯಿಂದ ನ್ಯೂಯಾರ್ಕ್ ನಗರಕ್ಕೆ ವಲಸೆ ಬಂದವರನ್ನು ಪ್ರಯಾಣಿಕರ ಹಡಗಿನಲ್ಲಿ ಜನಿಸಿದರು. ಆಕೆಯ ತಾಯಿ ಹಡಗಿನಲ್ಲಿ ಜನ್ಮ ನೀಡಿ ನಿಧನರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ