ರಷ್ಯಾ: ಇಬ್ಬರು ಐಎಸ್ ಉಗ್ರರ ಸಾವು

0
8

ಮಾಸ್ಕೋ

       ರಷ್ಯಾದ ಸೈಬೀರಿಯಾ ಪ್ರಾಂತ್ಯದ ಟ್ಯುಮೆನ್ ನಗರದಲ್ಲಿ ಫೆಡರಲ್ ಭದ್ರತಾ ಸೇವೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ ನ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.ಟ್ಯುಮೆನ್ ನಗರದ ಒಂದು ಮನೆಯಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದಾರೆ.ದಾಳಿ ನಡೆದ ಸ್ಥಳದಿಂದ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಗಳು ಸೇರಿದಂತೆ ಧಾರ್ಮಿಕ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ ಎಂದು ರಷ್ಯಾ ತನಿಖಾ ಸಮಿತಿ ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here