ಮೂವರಲ್ಲಿ ಹಂಚಿಕೆಯಾದ ಈ ಬಾರಿಯ ಭೌತಶಾಸ್ತ್ರದ ನೋಬೆಲ್…!

ಸ್ಟಾಕ್ ಹೋಮ್ :

    ಜಗತ್ತಿನ ಅತ್ಯಂತ ಪ್ರತಿಷ್ಠಿತವೆನ್ನಿಸಿದ ನೋಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ಈ ಬಾರಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಲಾಗಿದೆ ಅರ್ಧ ಭಾಗವನ್ನು ರೋಜರ್ ಪೆನ್ರೋಸ್‌ಗೆ ನೀಡಲಾಗಿದ್ದು  ಉಳಿದ ಭಾಗವನ್ನು ಜಂಟಿಯಾಗಿ ರೀನ್‌ಹಾರ್ಡ್ ಜೆನ್ಜೆಲ್ ಮತ್ತು ಆಂಡ್ರಿಯಾ ಘೆಜ್‌ಗೆ ಸಮನಾಗಿ ಹಂಚಲಾಗಿದೆ ಎಂದು ತಿಳಿದು ಬಂದಿದೆ.

   ಈ ಮೂವರು ಸಹ ಬ್ರಹ್ಮಾಂಡದಲ್ಲಿ ಅತ್ಯಂತ ದೈತ್ಯ ಮತ್ತು ಅತ್ಯಂತ ಹೆಚ್ಚಿಗೆ ಗುರುತ್ವಾಕರ್ಷಣೆ ಬಲವನ್ನು ಹೊಂದಿರುವ ಕಪ್ಪು ಕುಳಿಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಎನ್ನಲಾಗಿದೆ . ಇವರಲ್ಲಿ ರೋಜರ್ ಅವರಿಗೆ ಬ್ಲಾಕ್ ಹೋಲ್ ಇಸ್ ದ ಫಾರ್ಮೇಷನ್ ಇಸ್ ದ ರೋಬಸ್ಟ್ ಪ್ರಿಡಿಕ್ಷನ್ ಆಫ್ ದಿ ಥಿಯರಿ ಆಫ್ ರಿಲೇಟಿವಿಟಿ ಎಂಬ ಸಂಶೋಧನೆ ಗೆ ನೀಡಲಾಗಿದೆ ಮತ್ತು ಇನ್ನುಳಿದವರಿಗೆ ಕಪ್ಪು ಕುಳಿಗೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನೋಬಲ್ ಪುರಸ್ಕಾರದಲ್ಲಿ ಏನಿರುತ್ತದೆ..?

     ನೋಬೆಲ್ ಪುರಸ್ಕಾರವು ಒಂದು ಪಾರಿತೋಷಕ, ಡಿಪ್ಲೋಮದ ಒಂದು ಸರ್ಟಿಫಿಕೆಟ್ ಮತ್ತು 10 ಮಿಲಿಯನ್ ಸ್ವೀಡಿಶ್ ಕೊನೋರ್ (ಸ್ವೀಡನ್ ನ ಕರೆನ್ಸಿ).

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap