ಕೊರೊನಾಕ್ಕೆ ಹೆದರಿ 54000 ಖೈದಿಗಳ ಬಿಡುಗಡೆ..!

ಟೆಹರಾನ್

   ಕೊರೊನಾ ವೈರಸ್ (ಕೋವಿಡ್ 19) ಆರವತ್ತಕ್ಕೂ ಹೆಚ್ಚು ದೇಶಗಳನ್ನು ನಡುಗಿಸುತ್ತಿದ್ದು , ಇದರ ಪರಿಣಾಮವಾಗಿ ಎಲ್ಲಾ ದೇಶಗಳಲ್ಲಿಯೂ ಸೋಂಕು ಹೆಚ್ಚಳದ ಭೀತಿ ಎದುರಾಗಿದೆ.

   ಅದರಲ್ಲೂ  ಮಧ್ಯಪ್ರಾಚ್ಯ ರಾಷ್ಟ್ರವಾದ ಇರಾನ್ ತನ್ನ ದೇಶದ ಜೈಲಿಗಳಲ್ಲಿರುವ ಸುಮಾರು 54 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ.

    ಇರಾನ್‌ನಲ್ಲಿ 5 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ ಖೈದಿಗಳನ್ನು ತಪಾಸಣೆ ಮಾಡಿ, ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಈ ಬಿಡುಗಡೆ ಕೇವಲ ತಾತ್ಕಾಲಿಕ ಎಂದು ಸಹ ಹೇಳಿದೆ. ಇರಾನ್‌ ಜೈಲಿನಲ್ಲಿ ಕೈದಿಗಳು ಕಿಕ್ಕಿರಿದು ತುಂಬಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link