ವೆನಿಜುವೆಲಾದ ಎರಡು ಹಡಗು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್

     ವೆನಿಜುವೆಲಾದ ಆರ್ಥಿಕ ವ್ಯವಸ್ಥೆಯ ತೈಲ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಹಡಗು ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕ ಹಣಕಾಸು ಸಚಿವಾಲಯ ತಿಳಿಸಿದ್ದು, ವೆನಿಜುವೆಲಾದ ಭದ್ರತೆ ಹಾಗೂ ಸುರಕ್ಷತೆ ಕ್ಷೇತ್ರದಲ್ಲಿ ಕೆಲ ಮಾಡುವ ವ್ಯಕ್ತಿಗಳ ಮೇಲೂ ನಿರ್ಬಂಧ ಹೇರುವುದಾಗಿ ಸಚಿವಾಲಯ ಎಚ್ಚರಿಕೆ ನೀಡಿದೆ.

      ವೆನಿಜುವೆಲಾದಿಂದ ಕ್ಯೂಬಾಗೆ ತೈಲ ರಫ್ತು ಮಾಡುವ ಎರಡು ಹಡಗು ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಚಿವಾಲಯ ಜಾರಿಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

      ಸೇನಾ ಸಹಾಯಕ್ಕೆ ಬದಲಿಗೆ ವೆನಿಜುವೆಲಾದಿಂದ ತೈಲ ಆಮದು ಮಾಡುವುದನ್ನು ಕ್ಯೂಬಾ ಮುಂದುವರಿಸಿದರೆ ಅಮೆರಿಕ ಮುಂದಿನ ಕಾರ್ಯಾಚರಣೆ ನಡೆಸಲಿದೆ ಎಂದು ಅಮೆರಿಕದ ಹಣಕಾಸು ಸಚಿವ ಸ್ಟೀವನ್ ಮ್ನಚಿನ್ ಹೇಳಿದ್ದಾರೆ.

      ವೆನಿಜುವೆಲಾದ ಹಾಲಿ ರಾಷ್ಟ್ರಪತಿ ನಿಕೊಲಸ್ ಮದೂರೊ ಅವರ ಬೆಂಬಲ ಮುಂದುವರಿದರೆ ಅಲ್ಲಿನ ಸೇನೆ ಹಾಗೂ ಗುಪ್ತಚರ ಸೇವೆಗಳು ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ.ವೆನಿಜುವೆಲಾದಲ್ಲಿ ಹಾಲಿ ರಾಷ್ಟ್ರಪತಿ ನಿಕೊಲಸ್ ಮದೂರೊ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಗಮದಲ್ಲಿಟ್ಟುಕೊಂಡು ಅಮೆರಿಕ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಿ ಸೇನೆ ನಿಯೋಜಿಸುವ ಕುರಿತು ಕೂಡ ವಿಚಾರ ನಡೆಸುತ್ತಿದೆ.

       ನ್ಯಾಷನಲ್ ಅಸೆಂಬ್ಲಿ ಪಕ್ಷದ ಅಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಜುವಾನ್ ಗುವಾಯಿದೊ ಅವರು ಜನವರಿ 23ರಂದು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ತಮ್ಮನ್ನು ಮಧ್ಯಂತರ ರಾಷ್ಟ್ರಪತಿ ಎಂದು ಘೋಷಿಸಿಕೊಂಡಿದ್ದರು. ಏಪ್ರಿಲ್ 30ರಂದು ನಡೆದ ಕಾರಾಕಸ್ ನ ಲಾ ಕಾರಲೋಟಾದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಹಾಲಿ ರಾಷ್ಟ್ರಪತಿ ಮದುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಸ್ತೆಗಿಳಿದು ಹೋರಾಟ ನಡೆಸುವಂತೆ ಸೇನೆ ಹಾಗೂ ನಾಗಕರಿಗೆ ಕರೆ ನೀಡಿದ್ದರು.

        ಅಮೆರಿಕ ಸಮೇತ ಕೆನಡಾ, ಬ್ರೆಜಿಲ್, ಅರ್ಜೆಂಟಿನಾ, ಚೀಲಿ, ಕೊಲಂಬಿಯಾ, ಕೊಸ್ಟಾ ರಿಕಾ, ಗ್ವಾಟಿಮಾಲಾ, ಹೊಂಡಾರಸ್, ಪನಾಮಾ, ಪರುಗ್ವೆ ಹಾಗೂ ಪೇರು ಸೇರಿದಂತೆ 54 ದೇಶಗಳು ಪ್ರತಿಪಕ್ಷದ ನಾಯಕ ಜುವಾನ್ ಗವಾಯಿದೊ ಅವರನ್ನು ವೆನಿಜುವೆಲಾದ ಮಧ್ಯಂತರ ರಾಷ್ಟ್ರಪತಿ ಎಂದು ಮಾನ್ಯತೆ ನೀಡಲು ಘೋಷಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ