ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ!!?

ಇಸ್ಲಾಮಾಬಾದ್‌:

    ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ನೊಬೆಲ್​ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂದು ಪಾಕ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ. 

     ತಮ್ಮ ದೇಶದಲ್ಲಿ ಸೆರೆ ಸಿಕ್ಕ ಭಾರತೀಯ ಯೋಧ ಅಭಿನಂದನ್‌ ಅವರನ್ನು ಶಾಂತಿಯ ಸಂಕೇತವಾಗಿ ಭಾರತಕ್ಕೆ ಬಿಡುಗಡೆ ಮಾಡಿ, ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಿ, ಒತ್ತಡದ ಸಮಯದಲ್ಲೂ ಜವಾಬ್ದಾರಿಯುತವಾಗಿ ವರ್ತಿಸಿದ ಪಾಕ್​ ಪ್ರಧಾನಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು ಎಂದು ಎಂದು ಫವಾದ್​ ಚೌಧರಿ ತಮ್ಮ ನಿರ್ಣಯದಲ್ಲಿ ವಿವರಿಸಿದ್ದಾರೆ.  

      ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್‌ ಚೌಧರಿ ಈ ಕುರಿತ ಪ್ರಸ್ತಾಪವನ್ನು ಪಾಕಿಸ್ತಾನ ಸಂಸತ್ತಿನ ಕೆಳಮನೆಗೆ ಸಲ್ಲಿಸಿದ್ದು, ಅದು ಸೋಮವಾರ ಚರ್ಚೆಗೆ ಬರಲಿದೆ. . ಈಗಾಗಲೇ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಈ ಇನ್ಸಾಫ್ ಪಕ್ಷ ಬಹುಮತ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣ ಬೆಂಬಲ ದೊರಕಲಿದೆ ಎನ್ನಲಾಗಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಘನತೆಯನ್ನು ಹೆಚ್ಚಿಸಲು ವಿರೋಧ ಪಕ್ಷ ಕೂಡ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.    

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap