ಅಮೇರಿಕ:
ಅಮೇರಿಕಾದ ಮಾಜಿ ಜನಪ್ರಿಯ ಅಧ್ಯಕ್ಷ ಹಾಗೂ ಅತ್ಯತ್ತಮ ವಾಙ್ಮಿ ಜಾರ್ಜ್ ಎಚ್.ಡಬ್ಲ್ಯೂ ಬುಷ್ ಅವರು ನೆನ್ನೆ ಇಹಲೋಕ ತ್ಯಜಿಸಿದ್ದಾರೆ ಇವರು ಶೀತಲ ಸಮರದ ಅಂತ್ಯಕ್ಕೆ ಇಂಬು ಕೊಟ್ಟ ಮಹಾನ್ ನಾಯಕ ಅದಾದ ನಂತರ ಅಮೇರಿಕ ದೇಶವನ್ನು ಮುನ್ನೆಡೆಸುವ ಧೈರ್ಯ ಮಾಡಿದ ಮಹಾನ್ ಚೇತನ ನೆನ್ನೆ ಅವರ 94 ನೇ ವಯಸ್ಸಿನಲ್ಲಿ ಿಹಲೋಕದ ಜಂಜಡಗಳಿಂದ ಮುಕ್ತರಾಗಿದ್ದಾರೆ ಎಂದು ಅವರ ಕುಟುಂಬ ಘೋಷಿಸಿದೆ.
ಅವರ ಪ್ರೀತಿಯ ಮಕ್ಕಳಾದ ಜೆಬ್, ನೀಲ್, ಮಾರ್ವಿನ್, ಡೋರೊ ಮತ್ತು ಜಾರ್ಜ್ ಡಬ್ಲ್ಯೂ ಬಷ್ ಹೇಳಿರುವ ಪ್ರಕಾರ ವರ ತಂದೆಯು 94 ವರ್ಷಗಳ ಅಭೂತಪೂರ್ವ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ,”ಇಂದು ನಮ್ಮ ಪ್ರಿಯ ತಂದೆ ಮರಣಹೊಂದಿದ್ದಾರೆ ” ಟ್ವೀಟ್ ನ ಮೂಲಕ ತಿಳಿಸಿದ್ದಾರೆ.ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಒಬ್ಬ ಅತ್ಯಬ್ದುತವಾದ ವ್ಯಕ್ತಿ ಮತ್ತು ಯಾವುದೇ ಮಗ ಅಥವಾ ಮಗಳು ಬಯಸುವಂತಹ ಗುಣಗಳ್ಳುಳ ಅತ್ಯುತ್ತಮ ತಂದೆ.” ಎಂದು ತಮ್ಮ ತಂದೆಯ ಮೇಲಿನ ಅವರ ಭಾವನೆಗಳನ್ನು ತಿಳಿಸಿದ್ದಾರೆ.
Statement by President George W. Bush on the death of his father, President George H.W. Bush https://t.co/wDD0vnlN8U pic.twitter.com/t7UsDYSKY8
— George W. Bush Presidential Center (@TheBushCenter) December 1, 2018
ಜಾರ್ಜ್ ಎಚ್ ಡಬ್ಲ್ಯೂ ಬುಷ್ ತಮ್ಮ ಪತ್ನಿ ಏಪ್ರಿಲ್ನಲ್ಲಿ ಕಾಲವಾದ ನಂತರ ಅವರನ್ನೇ ಹಿಂಬಾಲಿಸಿ ಹೊರಟ್ಟಿದ್ದಾರೆ ಮತ್ತು ಅವರು ಇಷ್ಟಪಟ್ಟ “ವಿಶ್ವದ ಅತ್ಯಂತ ಪ್ರೀತಿಯ ಮಹಿಳೆ” ಬಾರ್ಬರಾ ಬುಷ್ ಕಾಲವಾದಾಗ ಅವರೀರ್ವರು ಮದುವೆಯಾಗಿ ಸಮರ್ಥವಾಗಿ 73 ವರ್ಷಗಳ ಸುದೀರ್ಘವಾದ ಸಂತೃಪ್ತ ಸಂಸಾರ ನಡೆಸಿದ್ದರು ಎಂದು ಬುಷ್ ತಿಳಿಸಿದ್ದಾರೆ .ಅವರ ಐದು ಮಕ್ಕಳು ಮತ್ತು 17 ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ