ಮತದಾರರನ್ನು ಸೆಳೆಯಲು ವಿನೂತನ ತಂತ್ರ ಬಳಸಿದ ಬಿಡನ್..!

ವಾಷಿಂಗ್ಟನ್:

     ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿರುವ ಭಾರತೀಯ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ‘ಲಗಾನ್’ ಜನಪ್ರಿಯ ‘ಚಲೇ ಚಲೋ’ ರಿಮಿಕ್ಸ್ ಗೀತೆಯ ವಿಡಿಯೋವೊಂದನ್ನು  ಡೆಮಾಕ್ರಟಿಕ್ ಪಕ್ಷದ ಸದಸ್ಯರು ಬಿಡುಗಡೆ ಮಾಡಿದ್ದಾರೆ.

    ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತ್ತು ಭಾರತೀಯ ಅಮೆರಿಕನ್ ಪ್ರಜೆ ಕಮಲಾ ಹ್ಯಾರಿಸ್ ಆಡಳಿತರೂಢ ರಿಪಬ್ಲಿಕನ್ ಪಕ್ಷದ ಡೊನೊಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ವಿರುದ್ಧ
ಪ್ರಬಲ ಪೈಟೋಟಿ ನಡೆಸಲಿದ್ದಾರೆ.

    ಚಲೇ ಚಾಲೋ, ಚಲೇ ಚಾಲೋ, ಬಿಡೆನ್ ಗೆ ಮತ ನೀಡಿ, ಬಿಡೆನ್ ಅವರನ್ನು ಜಯಶೀಲರನ್ನಾಗಿ ಎನ್ನುವ ಈ ಗೀತೆಯನ್ನು ಸಿಲಿಕಾನ್ ವ್ಯಾಲಿ ಮೂಲದ ಬಾಲಿವುಡ್ ಗಾಯಕ ಟಿಟ್ಲಿ ಬ್ಯಾನರ್ಜಿ ಸಾಹಿತ್ಯ ಬರೆದಿದ್ದು, ಉದ್ಯಮಿ ದಂಪತಿ ಅಜಯ್ ಮತ್ತು ವಿನಿತಾ ಭುಟೋರಿಯಾ ಬಿಡುಗಡೆ ಮಾಡಿದ್ದಾರೆ.
    ನವೆಂಬರ್ ನಲ್ಲಿ ಬಿಡೆನ್- ಹ್ಯಾರಿಸ್ ಪರ ಭಾರತೀಯ ಮತದಾರರನ್ನು ಸೆಳೆಯಲು  ಈ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಭುಟೋರಿಯಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap