ವುಹಾನ್ ಗಿಂತ ಮೊದಲೇ ಜಗತ್ತಿನಲ್ಲಿ ಕೊರೋನಾ ಹುಟ್ಟಿಕೊಂಡಿತ್ತು : ಚೀನಾ

ಬೀಜಿಂಗ್:

    ವುಹಾನ್ ಗಿಂತ ಮೊದಲೇ ಜಗತ್ತಿನ ನಾನ ಭಾಗಗಳಲ್ಲಿ ಮಾಹಾಮಾರಿ ಕೊರೋನಾ ಹುಟ್ಟಿಕೊಂಡಿತ್ತು. ಆದರೆ ಜಗತ್ತಿಗೆ ಮೊದಲು ತಿಳಿಸಿದ್ದು ನಾವು ಎಂದು ಚೀನಾ ಇದೀಗ ಹೊಸ ವರಸೆ ತೆಗೆದಿದೆ. 

    ಕಳೆದ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ಕೊರೋನಾವೈರಸ್ ಭುಗಿಲೆದ್ದಿದೆ. ಆದರೆ ಮೊದಲು ವರದಿ ಮಾಡಿದ ಮತ್ತು ಕಾರ್ಯನಿರ್ವಹಿಸಿದ ಏಕೈಕ ದೇಶ ಚೀನಾ. ವುಹಾನ್‌ನಲ್ಲಿ ಹೊರಹೊಮ್ಮುವ ಮೊದಲು ಮಾರಣಾಂತಿಕ ಸಾಂಕ್ರಾಮಿಕ ರೋಗವು ಹುಟ್ಟಿಕೊಂಡಿದೆ ಎಂದು ಚೀನಾ ಹೇಳಿದೆ. 

    ವುಹಾನ್‌ನಲ್ಲಿನ ಬಯೋ-ಲ್ಯಾಬ್‌ನಿಂದ ಕೋವಿಡ್ 19 ಹೊರಹೊಮ್ಮಿದೆ ಎಂಬ ಅಮೆರಿಕಾದ ಆರೋಪವನ್ನು ಅಲ್ಲಗಳೆದ ಚೀನಾ, ಕೊರೋನಾ ಮಾನವರಿಗೆ ಸೋಂಕು ತಗಲುವ ಮೊದಲು ಬಾವಲಿಗಳು ಅಥವಾ ಪ್ಯಾಂಗೊಲಿನ್‌ಗಳಿಂದ ಮಧ್ಯ ವುಹಾನ್ ನ ವೆಟ್ ಮಾರುಕಟ್ಟೆಯಿಂದ ಹೊರಹೊಮ್ಮಿದೆ ಎಂಬುದನ್ನು ತಿರಸ್ಕರಿಸಿದೆ.
     ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, “ಕೊರೋನಾವೈರಸ್ ಒಂದು ಹೊಸ ರೀತಿಯ ವೈರಸ್ ಆಗಿದ್ದು, ವರದಿಗಳು ಬಹಿರಂಗಗೊಳ್ಳುತ್ತಿದ್ದಂತೆ ಹೆಚ್ಚು ಹೆಚ್ಚು ಸಂಗತಿಗಳು ಹೊರಬರುತ್ತಿವೆ. ಕಳೆದ ವರ್ಷದ ಕೊನೆಯಲ್ಲಿ ವಿಶ್ವದ ನಾನಾ ಭಾಗಗಳಲ್ಲಿ ಸಾಂಕ್ರಾಮಿಕ ರೋಗವು ಭುಗಿಲೆದ್ದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಮೊದಲಿಗೆ ವರದಿ ಮಾಡಿದ್ದು ಚೀನಾ. ರೋಗಕಾರಕವನ್ನು ಗುರುತಿಸಿ ಅದರ ವಿವರಗಳನ್ನು ಅನುಕ್ರಮವಾಗಿ ಜಗತ್ತಿನೊಂದಿಗೆ ಹಂಚಿಕೊಳ್ಳಲಾಗಿದೆ ಎಂದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link