ಲಾಹೋರ್
ಪಾಕ್ ಸೇನೆಯ ಸಹಾಯದಿಂದ ಆಯ್ಕೆಯಾಗಿರುವ ಪಾಕ್ ಪ್ರಧಾನಿಯನ್ನು ಜನವರಿ ಒಳಗಾಗಿ ಮನೆಗೆ ಕಳುಹಿಸಿ. ಇಲ್ಲದಿದ್ದರೆ ತೀರಾ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ಬಿಲಾವಲ್ ಭುಟ್ಟೋ- ಜರ್ದಾರಿ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಸರ್ಕಾರ ಬಂಧಿಸಬಹುದು, ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬಹುದು. ಆದರೆ ದೇಶದ ಆರ್ಥಿಕತೆ ಹಾಗೂ ವಿದೇಶಾಂಗ ನೀತಿಯನ್ನು ಹಳ್ಳ ಹಿಡಿಸಿರುವುದು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೇನಾ ಕೈಗೊಂಬೆಗಳು ಅಧಿಕಾರದಿಂದ ಇಳಿಯುವ ಕಾಲ ಬಂದಿದೆ. ಒಂದೋ ಆಯ್ಕೆಗಾರರು ಮತ್ತು ಮೈತ್ರಿ ಪಕ್ಷದವರು ಎಚ್ಚೆತ್ತುಕೊಳ್ಳಬೇಕು ಅಥವಾ ಹೊಸ ವರ್ಷದಲ್ಲಿ ಜನರೇ ಎಲ್ಲ ಕೈಗೊಂಬೆಗಳನ್ನು ಒದ್ದೋಡಿಸುತ್ತಾರೆ ಎಂದು ಬಿಲಾವಲ್ ಟ್ವೀಟ್ ಮಾಡಿದ್ದಾರೆ. ಜನರು ಪ್ರಜಾಪ್ರಭುತ್ವ, ಮಾನವೀಯ ಹಾಗೂ ಆರ್ಥಿಕ ಹಕ್ಕುಗಳ ಜತೆಗೆ ಪಾಕಿಸ್ತಾನ ಪೀಪಲ್ಸ್ ಪಕ್ಷವು ಎಂದು ರಾಜೀ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ