ಲಂಡನ್:
ವಿಶ್ವದೆಲ್ಲೆಡೆ ರಕ್ಕಸ ಕೊರೋನಾ ವೈರಸ್ ಗೆ ಈ ವರೆಗೂ ಬಲಿಯಾದವರ ಸಂಖ್ಯೆ ಸರಿಸುಮಾರು 2 ಲಕ್ಷ ದಾಟಿದೆ.ಈ ನಡುವೆ ವಿಶ್ವದ ವಿವಿಧ 2,921,201 ಸೋಂಕಿನಿಂದ ಬಳಲುತ್ತಿದ್ದು, ಅಮೆರಿಕಾ ರಾಷ್ಟ್ರ ಒಂದರಲ್ಲಿಯೇ 960,896 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ .ಅಲ್ಲದೆ, ಆ ರಾಷ್ಟ್ರದಲ್ಲಿ ಸಾವಿನ ಸಂಖ್ಯೆ 54,265ಕ್ಕೆ ಏರಿಕೆಯಾಗಿದೆ.
ಇದರಂತೆ ಸೋಂಕಿಗೊಳಗಾಗಿರುವ 2,921,201 ಮಂದಿಯ ಪೈಕಿ 836,969 ಮಂದಿ ವೈರಸ್ ನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸ್ಪೇನ್ ರಾಷ್ಟ್ರದಲ್ಲಿ 223,759 ಮಂದಿ ಸೋಂಕಿನಿಂದ ಬಳಲುತ್ತಿದ್ದು, 22,902 ಜನರು ಬಲಿಯಾಗಿದ್ದಾರೆ. ಇಟಲಿಯಲ್ಲಿಯೂ ಮಹಾಮಾರಿಯ ಆರ್ಭಟ ಹೆಚ್ಚಾಗಿಯೇ ಇದ್ದು, ಈ ವರೆಗೂ 195,351 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 26,384 ಮಂದಿ ಸಾವನ್ನಪ್ಪಿದ್ದಾರೆ.
ಫ್ರಾನ್ಸ್ ನಲ್ಲಿ 161,488 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 22,614 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ 156,513 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 5,877 ಮಂದಿ ಮೃತಪಟ್ಟಿದ್ದಾರೆ. ಬ್ರಿಟನ್ ನಲ್ಲಿ 148,377 ಮಂದಿ ಸೋಂಕಿನಿಂದ ಬಳಲುತ್ತಿದ್ದು, 20,319 ಮಂದಿ ಬಲಿಯಾಗಿದ್ದಾರೆ.
