ಕೌಲಾಲಂಪುರ್
ಇಸ್ಲಾಮಿ ಧರ್ಮ ಪ್ರಚಾರಕ/ಭೋಧಕ ಜಾಕೀರ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲೇಷ್ಯಾ ಮಾನವ ಸಂಪನ್ಮೂಲ ಸಚಿವ ಎಂ.ಕುಲಸೇಗರನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕುಲಶೇಗರನ್ ಮಲೇಷಿಯಾದ ಸಮ್ಮಿಶ್ರ ಸರ್ಕಾರದ ಹಿರಿಯ-ಹಿಂದೂ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅನೇಕ ವರದಿಗಳ ಪ್ರಕಾರ, ಜಾಕೀರ್ ನಾಯಕ್ ಅವರ ಕಾರ್ಯಗಳು ಅವರನ್ನು ಯಾವುದೇ ವಿಧದಲ್ಲೂ ಶಾಶ್ವತ ನಾಗರೀಕತ್ವಕ್ಕೆ ಅರ್ಹರೆಂದು ಬಿಂಬಿಸಲು ವಿಫಲವಾಗಿವೆ ಆದುದರಿಂದ ಅವರ ನಾಗರೀಕತ್ವದ ವಿಚಾರವಾಗಿ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುದು ಮತ್ತು ಜಾಕಿರ್ ನಾಯಕ್ ನನ್ನು ಭಾರತಕ್ಕೆ ವಾಪಾಸ್ ಕಳುಹಿಸುವುದು ಉತ್ತಮ ೆಂದು ಅಭಿಪ್ರಾಯ ಪಟ್ಟಿದ್ದಾರೆ.
ಇದಲ್ಲದೆ ಜಾಕಿರ್ ನಾಯಕ್ ಪರಾರಿಯಾಗಿ ಮಲೇಷ್ಯಾವನ್ನು ಸೇರಿದ್ದು ಅವರ ವಿರುದ್ಧ ಭಾರತದಲ್ಲಿ ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿದ್ದಾರೆ” ಎಂದು ಸಭೆಗೆ ತಿಳಿಸಿದ್ದಾರೆ.
“ನಾಯಕ್ ಇತ್ತೀಚೆಗೆ ಮಲೇಷ್ಯಾದಲ್ಲಿನ ಹಿಂದೂಗಳನ್ನು ಭಾರತದ ಮುಸ್ಲಿಮರಿಗೆ ಹೋಲಿಸಿದ್ದಾರೆ ಮತ್ತು ಹಿಂದಿನವರು ಭಾರತದ ಮುಸ್ಲಿಮರಿಗೆ ಹೋಲಿಸಿದರೆ ಮಲೇಷ್ಯಾದಲ್ಲಿ 100% ಕ್ಕಿಂತ ಹೆಚ್ಚು ಹಕ್ಕುಗಳನ್ನು ಅನುಭವಿಸಿದ್ದಾರೆ ಎಂದು ಹೇಳಿದರು .ಮಲೇಷ್ಯಾದಲ್ಲಿ ಹಿಂದೂಗಳು, ಪ್ರಯೋಜನಗಳ ಹೊರತಾಗಿಯೂ, ತುನ್ ಡಾ.ಮಹಾತಿರ್ (ಮೊಹಮ್ಮದ್) ಗಿಂತ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಚ್ಚು ನಿಷ್ಠರಾಗಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. ”ಎಂದು ಕುಲಸೇಗರನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಮಲೇಷಿಯಾದಲ್ಲಿ ಜಾನಾಂಗೀಯ ದ್ವೇಷವನ್ನು ಬಿತ್ತುತ್ತಿರುವ ವಿವಾದಾತ್ಮಕ ಬೋಧಕ ಜಾಕಿರ್ ನಾಯಕ್ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದರು.
ಜಾಕಿರ್ ನಾಯಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಪಡೆಯಲು ಭಾರತ ಪ್ರಸ್ತುತ ಇಂಟರ್‌ಪೋಲ್ ಜೊತೆ ಮಾತುಕತೆ ನಡೆಸಿದೆಯಾದರೂ ಇಂಟರ್ ಪೋಲ್ ನೋಟೀಸ್ ಪಡೆಯಲು ನಿಮ್ಮ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಭಾರತದ ಮನವಿಯನ್ನು ತಿರಸ್ಕರಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
