ರಷ್ಯಾದೊಂದಿಗೆ 2020ರ ಇಂಧನ ಯೋಜನೆ ಘೋಷಿಸಲಿರುವ ಭಾರತ

ಮಾಸ್ಕೋ

   ರಷ್ಯಾ ಮತ್ತು ಭಾರತ ಸಹಕಾರದೊಂದಿಗೆ ಯೋಜಿಸಿರುವ ಮುಂದಿನ ವರ್ಷದ ಇಂಧನ ಯೋಜನೆಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶೃಂಗಸಭೆಯಲ್ಲಿ  ಅನಾವರಣಗೊಳಿಸುವ ಸಾಧ್ಯತೆ ಇದೆ.

   ಕಳೆದ ವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಷ್ಯಾ ಸಚಿವ ಅಲೆಕ್ಸಾಂಡರ್ ನೊವಾಕ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಐದು ವರ್ಷಗಳ ಯೋಜನೆ ಮತ್ತು ನಿರ್ದಿಷ್ಟ ಚಟುವಟಿಕೆಗಳ ಒಂದು ವರ್ಷದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ರಷ್ಯಾ ರಾಯಭಾರಿ ಡಿ.ಬಾಲಾ ವೆಂಕಟೇಶ್ ವರ್ಮಾ ತಿಳಿಸಿದರು.

   “ಶೃಂಗಸಭೆಯಲ್ಲಿ ಅವುಗಳನ್ನು ಘೋಷಿಸಲಾಗುವುದು” ಎಂದು ವರ್ಮಾ ಹೇಳಿದರು.ರಷ್ಯಾದಿಂದ ತೈಲ, ಅನಿಲ, ಎಲ್‌ಎನ್‌ಜಿ ವಿತರಣೆ ಮತ್ತು ಭಾರತದ ಇಂಧನ ಕ್ಷೇತ್ರದಲ್ಲಿ ರಷ್ಯಾದ ಹೂಡಿಕೆಗಳು ಸೇರಿದಂತೆ ಸಹಕಾರದ ಹಲವು ಕ್ಷೇತ್ರಗಳನ್ನು ಈ ಯೋಜನೆಯು ಒಳಗೊಂಡಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಎಲ್ಎನ್‌ಜಿಯಲ್ಲಿನ ಒಪ್ಪಂದಗಳು ನೊವಾಟೆಕ್‌ನ ಆರ್ಕ್ಟಿಕ್ ಅಥವಾ ಯಮಲ್ ಎಲ್‌ಎನ್‌ಜಿ ಯೋಜನೆಗಳಂತಹ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಒಳಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲವನ್ನು ಸೇರಿಸಿಕೊಳ್ಳಲಾಗಿದೆ ಎಂದರು.

      ರೋಸ್ನೆಫ್ಟ್, ಗಾಜ್ಪ್ರೊಮ್ ಮತ್ತು ನೊವಾಟೆಕ್ ಮತ್ತು ರಷ್ಯಾದ ಅನೇಕ ಕಂಪನಿಗಳು ಈಗಾಗಲೇ ತಮ್ಮ ಭಾರತೀಯ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಅವರು ತಿಳಿಸಿದರು.ವ್ಲಾಡಿವೋಸ್ಟಾಕ್‌ನಲ್ಲಿ ನಡೆಯುವ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಪುಟಿನ್ ಮತ್ತು ಮೋದಿ ಭೇಟಿಯಾಗಲಿದ್ದಾರೆ. ಶೃಂಗಸಭೆಯಲ್ಲಿ ಭಾರತ, ರಷ್ಯಾದೊಂದಿಗೆ 35 ರಿಂದ 40 ಒಪ್ಪಂದಕ್ಕೆ ಸಹಿ ಹಾಕುವ ನೀರಿಕ್ಷೆಯಲ್ಲಿದೆ ಎಂದು ವರ್ಮಾ ಹೇಳಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link