ಚೀನಾ ಸೇನೆಗೆ ಲಿಯೋವಾಂಗ್ಜೆ -2 ಸೇರ್ಪಡೆ ಸಾಧ್ಯತೆ

0
57

ಚೀನ:

        ಚೀನಾದ ಮೊದಲ ಮಾನವರಹಿತ ಕ್ಷಿಪಣಿ ಹಾರಿಸಬಲ್ಲ ದೋಣಿಯನ್ನು ಇತ್ತೀಚೆಗೆ ಪರೀಕ್ಷಿಸಲಾಗಿದೆ ಅದರ  ಕ್ಷಿಪಣಿ ಉಡಾವಣಾ ಸಾರ್ಮತ್ಯವನ್ನು ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಝುಹೈನಲ್ಲಿ  ಚೀನಾದ 12ನೇ ಅಂತರಾಷ್ಟ್ರೀಯ ಏವಿಯೇಷನ್ ​​ಮತ್ತು ಏರೋಸ್ಪೇಸ್ ಎಕ್ಸಿಬಿಷನ್ (ಏರ್ ಶೋ ಚೀನಾ) ನಲ್ಲಿ ಪ್ರದರ್ಶನಕ್ಕಿಡಲಾಗಿತ್ತು.ಮಾನವರಹಿತ ದೋಣಿಯಾದ  ಲಿಯಾವಾಂಗ್ಝೆ -2, ಯಶಸ್ವಿಯಾಗಿ ಕ್ಷಿಪಣಿಯನ್ನು ಉಡಾವಣೆ ಮಾಡಿ ತನ್ನ ಸಾರ್ಮಥ್ಯವನ್ನು ತೋರಿಸುವ ಮೂಲಕ  ದೇಶದ ಮೊದಲ ಮಾನವರಹಿತ ಕ್ಷಿಪಣಿ ಪ್ರಯೋಗಿಸುವ ಹಡಗು ಎಂಬ ಖ್ಯಾತಿ ಹೊಂದಿದೆ . ಇಸ್ರೇಲ್ ನ “ಪ್ರೊಟೆಕ್ಟರ್” ಸರಣಿಯ  ಮಾನವರಹಿತ ಹಡಗು ಕಳೆದ ವರ್ಷ ಅಭ್ಯಾಸದ ಸಮಯದಲ್ಲಿ ಯಶಸ್ವಿಯಾಗಿ ಕ್ಷಿಪಣಿಗಳನ್ನು ಉಡಾವನಡೆ ಮಾಡಿತ್ತು.

       ಇದೇ ಮೊದಲ ಬಾರಿಗೆ ಲಿಯೋವಾಂಗ್ಜೆ -2 ಸಾರ್ವಜನಿಕರಿಗೆ ತೋರಿಸಲಾಗಿದೆ. ಝುಹಾಯ್ ಮೂಲದ ಶಿಪ್ಪಿಂಗ್ ಡೆವಲಪರ್ ಒಷಾಲ್ಫಾ, ಕ್ಸಿಯಾನ್ ಇನ್ಸ್ಟಿಟ್ಯೂಟ್ ಆಫ್ ಮಾಡರ್ನ್ ಕಂಟ್ರೋಲ್ ಟೆಕ್ನಾಲಜಿ ಮತ್ತು ಹುವಾಹಾಂಗ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರೋ-ಆಪ್ಟಿಕ್ಸ್ ಇದನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದೆ ಎಂದು ತಿಳಿದು ಬಂದಿದೆ.ಈ ಮಾನವರಹಿತ ದೋಣಿ 7.5 ಮೀಟರ್ ಉದ್ದ ಮತ್ತು 2.7 ಮೀಟರ್ ಅಗಲವಿದೆ, 3.7 ಟನ್ ಟನ್ಗಳಷ್ಟು ಭಾರ ವಯ್ಯಬಲ್ಲ ಮತ್ತು ಗರಿಷ್ಠ ವೇಗ 45 ನಾವಿಕ ಮೈಲುಗಳ ವೇಗವನ್ನು ತಲುಪುವ ಸಾರ್ಮಥ್ಯ ಹೊಂದಿದೆ. ಇದು 22 ನಾಟ್ಗಳ ವೇಗದಲ್ಲಿ 310 ನಾಟಿಕಲ್ ಮೈಲುಗಳಷ್ಟು ನೌಕಾಯಾನ ಮಾಡಬಲ್ಲದು.ಿದನ್ನು ಸಮುದ್ರದಲ್ಲಿ ಉಂಟಾಗುವ ಯಾವ ರೀತಿಯ ಪರಿಸ್ಥಿತಿಯಲ್ಲಾದರು ಬಳಸಬಹುದು.

       ಲಿಯಾವಾಂಗ್ಝೆ -2 ಸ್ಥಳಾನ್ವೇಷಣೆ ಮತ್ತು ನಿರ್ದಿಷ್ಠ ದಾಳಿ  ಕೇಂದ್ರಿತ  ಮಾನವರಹಿತ ವಾಹನವಾಗಿದ್ದು, ಚಿತ್ರ-ಬೆಂಬಲಿತ ಟರ್ಮಿನಲ್ ಮಾರ್ಗದರ್ಶನದ ವ್ಯವಸ್ಥೆಯಿಂದ ಗರಿಷ್ಠ 5 ಕಿಲೋಮೀಟರ್ಗಳಷ್ಟು ನಾಲ್ಕು ಕ್ಷಿಪಣಿಗಳನ್ನು ಹಾರಿಸಲು  ಇದರ ಮುಂಭಾಗದಲ್ಲಿ ಕ್ವಾಡ್ರುಪಲ್ ಕ್ಷಿಪಣಿ ಲಾಂಚರ್ ಅಳವಡಿಸಲಾಗಿದೆ.ದ್ವೀಪಗಳು ಮತ್ತು ಗಡಿ ನೀರಿನಲ್ಲಿ ಸುತ್ತಲಿನ ಗಸ್ತು ಕಾರ್ಯಾಚರಣೆಗಾಗಿ ಇದನ್ಜು ಬಳಸಬಹುದು ಸಮುದ್ರ ಮತ್ತು ಭೂಮಿ ಮೇಲೆ ಮಧ್ಯಮ ಮತ್ತು ಸಣ್ಣ ಗುರಿಗಳನ್ನು ಆಕ್ರಮಣ ಮಾಡಲು ಇದು ಸಹಾಯಕಾರಿಯಾಗಬಹುದು ಎಂದು ಚಿನಾ ಸೇನೆ ತಿಳಿಸಿದೆ ಇಂತಹ ದೋಣಿಗಳ ಗುಂಪು ದೊಡ್ಡ ಗುರಿಗಳ ಮೇಲೆ ಅಸಾಮರ್ಥ್ಯದ ನಿರ್ದಿಷ್ಠವಾದ ದಾಳಿ ಸಹ ನಡೆಸಬಹುದು.

      ಈ ದೋಣಿ ವಿಭಿನ್ನ ಕಾರ್ಯಾಚರಣಾ ವಿಧಾನಗಳನ್ನು ಹೊಂದಿದ್ದು, ಉದಾಹರಣೆಗೆ ಸಂಪೂರ್ಣ ಸ್ವಾಯತ್ತ, ಅರೆ ಸ್ವಾಯತ್ತ ಮತ್ತು ದೂರದ-ನಿಯಂತ್ರಿತವಾಗಿಯೂ ಇದನ್ನು ಕಾರ್ಯನಿರತವಾಗಿಸಬಹುದು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here