ಮಾಜಿ ಫುಟ್ಬಾಲ್ ಆಟಗಾರ ಪೀಲೆ ಆಸ್ಪತ್ರೆಗೆ ದಾಖಲು

0
8

ರಿಯೊ ಡಿ ಜನೈರೊ

      ಬ್ರೆಜಿಲ್ ನ ಶ್ರೇಷ್ಠ ಫುಟ್ಬಾಲ್ ಆಟಗಾರ ಪಿಲೆ ಅವರು ಮೂತ್ರ ಸೋಂಕಿನಿಂದ ಬಳಲುತ್ತಿದ್ದು, ಅವರನ್ನು ಮತ್ತೇ ಸಾವೊ ಪಾಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೋಮವಾರವಷ್ಟೇ ಫ್ರಾನ್ಸ್ ನ ಆಸ್ಪತ್ರೆಯೊಂದರಿಂದ ಬಿಡುಗಡೆಯಾಗಿದ್ದ 78 ವರ್ಷದ ಬ್ರೆಜಿಲ್ ಆಟಗಾರನನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ವಾಪಸ್‍ ಬ್ರೆಜಿಲ್‍ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಮಂಗಳವಾರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಸಾವೊ ಪಾಲೊದ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಹಿಲ್ ಚೇರ್ ಮೇಲೆ ಕುಳಿತುಕೊಂಡೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ತ್ವರಿತ ಚೇತರಿಕೆ ಬಯಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲವೂ ಸರಿಯಾಗಿದೆ. ಆದ್ದರಿಂದಲೇ ಇಂದು ನಾನು ನಿಮ್ಮ ಮುಂದಿದ್ದೇನೆ.” ಎಂದು ಹೇಳಿದರು.

       ಜಾಗತಿಕ ಫುಟ್ಬಾಲ್ ದಂತಕತೆ, ಮೂತ್ರಪಿಂಡದ ಕಲ್ಲಿನ ಹರಳು ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ವೈದ್ಯರು ಕಲ್ಲುಗಳನ್ನು ಹೊರತೆಗೆಯಲಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಆದರೆ, ಅವರನ್ನು ಆಸ್ಪತ್ರೆಯಿಂದ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬ ಕುರಿತು ವೈದ್ಯರು ಸ್ಪಷ್ಟಪಡಿಸಿಲ್ಲ.ಅಲ್ಲಿ ಅವರು ಏಪ್ರಿಲ್ 2 ರಿಂದ ವೈದ್ಯರ ಆರೈಕೆಯಲ್ಲಿದ್ದರು.ಸದ್ಯ ಪಿಲೆ ಆರೋಗ್ಯದ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಸೇಂಟ್-ಜರ್ಮೆನ್ ಮತ್ತು ಫ್ರಾನ್ಸ್ ನ ಕಿಲಿಯನ್ ಬಪ್ಪೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪಿಲೆ ಅವರಿಗೆ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 2ರಂದು ಪ್ಯಾರಿಸ್ ನ ಅಮೆರಿಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here