ಇಸ್ಲಾಮಾಬಾದ್
ಭಾರತದ ಮೇಲೆ ದಾಳಿ ಮಾಡುವ ಹೇಳಿಕೆಗಳನ್ನೇ ನೀಡುತ್ತಾ ಬಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಳಿ ಇದೀಗ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುವಂತೆ. ಸಚಿವಾಲಯದ ಲಕ್ಷಾಂತರ ರುಪಾಯಿ ವಿದ್ಯುತ್ ಬಿಲ್ ಪಾವತಿ ಮಾಡದ ಪರಿಣಾಮ ಇದೀಗ ಕರೆಂಟ್ ಕಟ್ ಮಾಡುವ ಪರಿಸ್ಥಿತಿ ಬಂದಿದೆ ಎಂದು ವರದಿಯಾಗಿದೆ.
ಇಮ್ರಾನ್ ಖಾನ್ ಸಚಿವಾಲಯದ 41 ಲಕ್ಷ ರುಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿದೆ. ಬಾಕಿ 41 ಲಕ್ಷ ರುಪಾಯಿ ಕೂಡಲೇ ಪಾವತಿಸುವಂತೆ ಇಸ್ಲಾಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ(ಐಇಎಸ್ ಸಿಒ) ಬುಧವಾರ ನೋಟಿಸ್ ಜಾರಿ ಮಾಡಿದೆ ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ.ಪಾಕ್ ಪ್ರಧಾನಿ ಸಚಿವಾಲಯದ ಕಳೆದ ತಿಂಗಳ ವಿದ್ಯುತ್ ಬಿಲ್ ಪಾವತಿ ಮೊತ್ತ 35 ಲಕ್ಷ ರುಪಾಯಿ ಇತ್ತು. ಈ ತಿಂಗಳ ಬಿಲ್ ಸೇರಿ ಇದೀಗ ಆ ಮೊತ್ತ 41 ಲಕ್ಷಕ್ಕೆ ಏರಿಕೆಯಾಗಿದ್ದು ಕೂಡಲೇ ಬಿಲ್ ಪಾವತಿಸುವಂತೆ ಐಇಎಸ್ ಸಿಒ ನೋಟಿಸ್ ನೀಡಿದೆ.
