ಕೊಲಂಬೊ:
ಶ್ರೀಲಂಕಾದ ರಾಜಕೀಯದಲ್ಲಿ ಈಗ ಅನಿಶ್ಚಿತತೆಯ ವಾತಾವರಣ ಿರುವುದರಿಂದ ಲ್ಲಿನ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ ಮಾಜಿ ಪ್ರಧಾನಿ ರಾಜಪಕ್ಸ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ಕಡಿದುಕೊಳ್ಳುವ ಮೂಲಕ ರಾಜಕೀಯದಲ್ಲಿ ಯಾರು ಮಿತ್ರರಲ್ಲ ಯಾರೂ ಶತ್ರುಗಳಲ್ಲ ಎಂಬ ವಾಕ್ಯಕ್ಕೆ ಮರುಜೀವ ತುಂಬಿದ್ದಾರೆ.
ಮಹಿಂದಾ ರಾಜಪಕ್ಸ ತಾವು ಇಷ್ಟು ದಿನ ಮಾತೃ ರೂಪಿಯಾಗಿ ನೋಡಿದ ಫ್ರೀಡಂ ಪಾರ್ಟಿ (ಎಸ್ಎಲ್ಎಫ್ಪಿ) ತೊರೆದು ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ಎಲ್ಪಿಪಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ.