ಬೆಂಗಳೂರು:
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಯಶಸ್ವಿಯಾಗಿಲ್ಲ, ರಾಜ್ಯ ಸರ್ಕಾರ ಯೋಜನೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದ್ದು, ಈ ನಡುವೆ ಸರ್ಕಾರ ಯೋಜನೆಯ ಪ್ರಗತಿಯನ್ನು ವಿವರಿಸಿ ಸಮರ್ಥಿಸಿಕೊಂಡಿದೆ.ವಿಧಾನಪರಿಷತ್ ನಲ್ಲಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಶೇ.90ರಷ್ಟು ಬಿಲ್ ಪಾವತಿಸಲಾಗಿದೆ, ಆದರೆ ಕಾಮಗಾರಿ ಪೂರ್ಣಗೊಂಡಿದೆಯೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹಣವನ್ನು ನೀಡಿದೆ. ಸರ್ಕಾರ 570 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಹೇಳಿದರು.
ಜಲ ಮೂಲವಿಲ್ಲದೆ ಯೋಜನೆಗೆ ಕೇಂದ್ರವು ಒಪ್ಪುವುದಿಲ್ಲ. ವಿವರವಾದ ಯೋಜನಾ ವರದಿ ಮತ್ತು ನೀರಿನ ಮೂಲವಿಲ್ಲದೆ ಕೆಲಸ ಸಾಧ್ಯವಿಲ್ಲ. ಜಲ ಜೀವನ್ ಮಿಷನ್ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತದೆ, ಯೋಜನೆಗಾಗಿ ಕೇಂದ್ರದಿಂದ 570 ಕೋಟಿ ರೂ.ಗಳನ್ನು ಕೇಳಲಾಗಿತ್ತು. ಆದರೆ, ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಸಿಟಿ ರವಿಯವರು ಕಳಪೆ ಕಾಮಗಾರಿಯನ್ನು ಸರ್ಕಾರಕ್ಕೆ ಗಮನಕ್ಕೆ ತರುವ ಪ್ರಯತ್ನ ಮಾಡಿದರು.
ನಂತರ ಮಾತನಾಡಿದ ಖರ್ಗೆ, ,550 ಹಳ್ಳಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಚಿಕ್ಕಮಗಳೂರಿನಲ್ಲಿ ನೀರಿನ ಮೂಲದಲ್ಲಿ ಸಮಸ್ಯೆ ಇದ್ದರೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದರು.
ಜಲ ಜೀವನ್ ಮಿಷನ್ ಸೇರಿದಂತೆ 65,000 ಕೋಟಿ ರೂ.ಗಳಲ್ಲಿ ಕೇವಲ 32,000 ಕೋಟಿ ರೂ. ಅನುದಾನ ಬಂದಿದೆ. ಚಿಕ್ಕಮಗಳೂರಿಗೆ, ಜೆಜೆಎಂಗೆ 1,000 ಕೋಟಿ ರೂ. ಅನುದಾನದಲ್ಲಿ, ಇಲ್ಲಿಯವರೆಗೆ ಕೇವಲ 320 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಜೂನ್ 2026 ರ ವೇಳೆಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
