ಇನ್ನು ಕೈಸೇರದ ದರ್ಶನ್‌ ಜಾಮೀನು ಆದೇಶ ಪ್ರತಿ : ಆ ನಿರ್ಧಾರ ತಗೋತಾರ ಪೊಲೀಸರು…!

ಬೆಂಗಳೂರು :

   ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಅವರಿಗೆ ಕರ್ನಾಟಕದ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಈ ಅವಧಿಯನ್ನು ಅವರು ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ಹೀಗಿರುವಾಗಲೇ ದರ್ಶನ್​ಗೆ ಶೀಘ್ರವೇ ಬಿಗ್ ಶಾಕ್ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ಆ ಕುರಿತು ಟಿವಿ9ನಲ್ಲಿ ಎಕ್ಸ್​​ಕ್ಲ್ಯೂಸಿವ್ ವಿಚಾರ ಹೇಳುತ್ತಿದ್ದೇವೆ.

   ದರ್ಶನ್​ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಕೊಟ್ಟಿರುವ ಆದೇಶದ ಪೂರ್ಣ ಪ್ರತಿ ಇನ್ನೂ ಪೊಲೀಸರ ಕೈ ಸೇರಿಲ್ಲ. ಇದಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಅಕ್ಟೋಬರ್​ 30ರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದ ಜೊತೆ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗ ಹೈಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

   ಸೋಮವಾರ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಚಿಂತಿಸಲಾಗಿದೆ. ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದರೆ ದರ್ಶನ್​ಗೆ ಹಿನ್ನಡೆ ಆಗಬಹುದು.

   ದರ್ಶನ್ ಪ್ರಭಾವಿ ವ್ಯಕ್ತಿ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಈಗ ಅವರು ಜಾಮೀನು ಅವಧಿಯನ್ನು ಕೇವಲ ಚಿಕಿತ್ಸೆ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯೂ ಇರುತ್ತದೆ. ಇದನ್ನು ಪೊಲೀಸರು ಸುಪ್ರೀಂಕೋರ್ಟ್​ನಲ್ಲಿ ಹೇಳುವ ಸಾಧ್ಯತೆ ಇದೆ. 

   ದರ್ಶನ್ ಅವರು ಜೂನ್​ 11ರಂದು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾದರು. ಬೆಂಗಳೂರಲ್ಲಿ ಇದ್ದ ಅವರು ನಂತರ ಬಳ್ಳಾರಿ ಜೈಲಿಗೆ ಶಿಫ್ಟ್ ಆದರು. ಈಗ ಅವರಿಗೆ ನಿರಂತರವಾಗಿ ಬೆನ್ನು ನೋವು ಕಾಡುತ್ತಿದೆ. ನಡೆದಾಡಲೂ ಆಗದ ಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಅವರು ಆಪರೇಷನ್​ ಮಾಡಿಕೊಳ್ಳುವ ಸಾಧ್ಯತೆ ಇದೆ.

 

Recent Articles

spot_img

Related Stories

Share via
Copy link