ರಾಘವೇಂದ್ರ ಗೊಲ್ಲಹಳ್ಳಿ ನಿರ್ದೇಶನದ ‘ಕಾಲಚಕ್ರ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ರಶ್ಮಿ ಫಿಲಂಸ್ ಲಾಂಚನದಲ್ಲಿ ರಶ್ಮಿ ಕೆ ನಿರ್ಮಾಣ ಮಾಡಿರೋ ಕಾಲಚಕ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿರೋ ಕಾಲಚಕ್ರದಲ್ಲಿ ರಕ್ಷಾ, ದೀಪಕ್ ಶೆಟ್ಟಿ, ಅವಿಕಾ ರಾಥೋಡ್ ಮುಂತಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತ, ನವೀನ್ ಕುಮಾರ್ ಮತ್ತು ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ನವೆಂಬರ್ 20ರಂದು ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ನಡೆದ ಅದ್ದೂರಿ ಚಿತ್ರೀಕರಣದ ಮೂಲಕ ಕಾಲಚಕ್ರ ಅಂತಿಮ ಹಂತ ತಲುಪಿಕೊಂಡಿದೆ. ಬೇಗನೆ ಪೋಸ್ಟ್ ಪ್ರಡಕ್ಷನ್ ಕಾರ್ಯ ಮುಗಿಸಿಕೊಂಡು ತೆರೆಗೆ ಬರಲು ಈ ಚಿತ್ರ ತಯಾರಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
