‘ಬಹದ್ದೂರ್’ ಗಂಡು ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ”ನಾನು ಪಕ್ಕಾ ಲವ್ ಮ್ಯಾರೇಜ್ ಆಗೋದು” ಅಂತ ಧ್ರುವ ಸರ್ಜಾ ಹೇಳಿದ್ದರು. ಅದರಂತೆ ಪ್ರೀತಿಸಿದ ಹುಡುಗಿಯ ಜೊತೆಗೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳಷ್ಟೇ ತಮ್ಮ ಹುಟ್ಟುಹಬ್ಬದ ದಿನ(ಅಕ್ಟೋಬರ್ 6) ”ನನಗೀಗ 30 ವರ್ಷ. 31ನೇ ಬರ್ತಡೆಯಷ್ಟರಲ್ಲಿ ಮದುವೆ ಆಗುತ್ತೇನೆ” ಎಂದು ಧ್ರುವ ಸರ್ಜಾ ಹೇಳಿಕೆ ನೀಡಿದ್ದರು. ಅದರಂತೆ ಧ್ರುವ ಸರ್ಜಾ ಸದ್ಯ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 10 ರಂದು ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಬೆಂಗಳೂರಿನ ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಎಂಗೇಜ್ ಮೆಂಟ್ ಗಾಗಿ ಆರ್ಟ್ ಡೈರೆಕ್ಟರ್ ಸೆಟ್ ರೆಡಿ ಮಾಡುತ್ತಿದ್ದಾರೆ.
ಧ್ರುವ ಸರ್ಜಾ ವರಿಸಲಿರುವ ಹುಡುಗಿ ಯಾರು.? ಆಕೆಯ ಹಿನ್ನಲೆ ಏನು.? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೆ. ನೆರೆ ಮನೆಯ ಸ್ನೇಹಿತೆಯಾಗಿರೋ ಪ್ರೇರಣಾ ಜೊತೆ ಧ್ರುವ ಡಿಸೆಂಬರ್ 10ರಂದು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ. ಬಹುದಿನಗಳ ಗೆಳತಿ ಪ್ರೇರಣಾ ಶಂಕರ್ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಧೃವಾ ಸರ್ಜಾ, ಹೊಸ ವರ್ಷದಲ್ಲಿ ಮದುವೆಯಾಗಲಿದ್ದು, ಮದುವೆಯ ದಿನಾಂಕಕ್ಕಾಗಿ ನಿಶ್ಚಿತಾರ್ಥದವರೆಗೂ ಕಾಯಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
