ತುಮಕೂರು:
ಇದು ನನ್ನ ಕೊನೆ ಚುನಾವಣೆ, ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ ಎಂದು ತುಮಕೂರಿನಲ್ಲಿ ನೂತನ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಅವರನ್ನು ಕರೆತರೋದಿಲ್ಲ ಎಂದ ಬಸವರಾಜು, ಕೆ.ಎನ್.ರಾಜಣ್ಣ ಸೇರಿ ಹಲವು ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ. ಯಾರನ್ನಾದ್ರೂ ತಯಾರು ಮಾಡುತ್ತೇನೆ. ಆರೋಗ್ಯ ಚೆನ್ನಾಗಿದ್ದಾರೆ ನಾನು ಯಾರನ್ನಾದ್ರೂ ಸ್ಪರ್ಧೆಗೆ ನಿಲ್ಲಿಸುತ್ತೇನೆ. ಮಧುಗಿರಿ ಹಾಲಿ ಶಾಸಕ ವೀರಭದ್ರಯ್ಯ ಕಾರ್ಯವೈಖರಿ ನೋಡಿ ನನಗೆ ಮತ ಚಲಾಯಿಸಿದ್ದಾರೆ. ಕೆ.ಎನ್.ರಾಜಣ್ಣ ಬೆಂಬಲಿಗರು ಸಿಂಪತಿಯಾಗಿ ಮತ ಹಾಕಿದ್ದಾರೆಂದು ಬಸವರಾಜು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








