ಇಂದಿನಿಂದ KPSC ಇಲಾಖ ಪರೀಕ್ಷೆ……!

ಬೆಂಗಳೂರು:

    ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಇಂದಿನಿಂದ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಿದೆ.

   ಜೂನ್ 7ರಿಂದ 9ರ ವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಲಾಖಾ ಪರೀಕ್ಷೆ ನಡೆಯಲಿದೆ. ಜೂನ್ 11 ರಿಂದ 14, ಜೂನ್ 19 ರಿಂದ 23ರ ವರೆಗೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು.

    ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ನಡೆಸಲಾಗುವ ಇಲಾಖಾ ಪರೀಕ್ಷೆಗಳು ಇದಾಗಿದ್ದು, ವೇಳಾಪಟ್ಟಿ ಸಮಯ ಪ್ರತಿ ಪತ್ರಿಕೆಗಳಿಗೂ ಬೇರೆ ಬೇರೆ ಇರುತ್ತದೆ. ದಿನಾಂಕ 07-06-2024 ರಿಂದ 09-06-2024 ಮತ್ತು 11-06-2024 ರಿಂದ 23-06-2024 ರವರೆಗೆ (10-06-2024 ಮತ್ತು 15-06-2024 ರಿಂದ 18-06-2024 ದಿನಗಳನ್ನು ಹೊರತುಪಡಿಸಿ) ಪರೀಕ್ಷೆಗಳನ್ನು ನಡೆಸಲಾಗುತ್ತದೆ.

   ಸ್ಥಳೀಯ ನಿರೀಕ್ಷಣಾದಿಕಾರಿ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಿಶೇಷ ಚೇತನರಿಗೆ, ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಕೆಪಿಎಸ್‍ಸಿ ನಿಯಮಾನುಸಾರ ಪರೀಕ್ಷೆ ನಡೆಸಲಾಗುವುದು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.

    ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಇತರೆ ಡಿಜಿಟಲ್ ಸಾಧನಗಳಿಗೆ ಅವಕಾಶವಿರುವುದಿಲ್ಲ. ಪೋಲಿಸ್ ಸಿಬ್ಬಂದಿಗಳು, ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪರೀಕ್ಷೆಗಳು ಶಾಂತಯುತವಾಗಿ ನಡೆಯಲು ಅನುವಾಗುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಳು ಮತ್ತು ಹಾಗೂ ಸಿಬ್ಬಂದಿಗಳು ಎಚ್ವರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap