ಉತ್ತರಕಾಶಿ:
ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಹೊತ್ತು ಬರುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ.
Uttarakhand: Visuals from the site of helicopter crash in Uttarkashi Dist. The helicopter was carrying relief material to flood-affected areas in the Dist.All 3 persons, Captain Lal, Co-pilot Shailesh&a local person Rajpal,who were on-board the helicopter, have died in the crash. pic.twitter.com/S6yfv3bcSw
— ANI (@ANI) August 21, 2019
ಮೃತರನ್ನು ಪೈಲಟ್ ರಾಜ್ ಪಾಲ್, ಸಹ ಪೈಲಟ್ ಕಪ್ತಾಲ್ ಲಾಲ್ ಹಾಗೂ ಸ್ಥಳೀಯರಾದ ರಮೇಶ್ ಸವಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಮಂಗಳವಾರ ಮಧ್ಯಾಹ್ನ ಉತ್ತರಾಖಂಡ್ನ ಉತ್ತರ ಕಾಶಿಯಲ್ಲಿ ನಡೆದಿದೆ.
ಉತ್ತರ ಕಾಶಿ ಜಿಲ್ಲೆಯ ಮೊರಿಯಿಂದ ಮೊಲ್ದಿ ಕಡೆ ಹಾರುತ್ತಿದ್ದ ಹೆಲಿಕಾಪ್ಟರ್ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಆಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿತ್ತು ಎಂದು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟರ್ ಮಾಹಿತಿ ನೀಡಿದ್ದಾರೆ.
Uttarkashi: Search & rescue operation by SDRF, NDRF, ITBP & Police continue in Mori tehsil following cloud-burst. #Uttarakhand pic.twitter.com/rKmEQC3hN5
— ANI (@ANI) August 21, 2019
ಪತನವಾದ ಮಾಹಿತಿ ತಿಳಿಯುತ್ತಿದ್ದಂತೆಯೇ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು(ಐಟಿಬಿಪಿ) ಘಟನಾ ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಪಡೆದುಕೊಂಡಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ