ಶ್ರೀನಗರ :

ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಎಂಟು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಗುರುವಾರ ರಾತ್ರಿಯಿಂದಲೂ ಪಂಪೋರ್ ಮತ್ತು ಶೋಪಿಯಾನ್ನಲ್ಲಿ ಜಂಟಿ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಪಾಂಪೋರ್ ಪ್ರದೇಶದ ಮೀಜ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಆತನ ಹತ್ಯೆ ಬಳಿಕ ಮತ್ತಿಬ್ಬರು ಉಗ್ರರು ಸ್ಥಳೀಯ ಜಾಮಿಯಾ ಮಸೀದಿಗೆ ಪ್ರವೇಶಿಸಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭವಾಯಿತು. ಮಸೀದಿಯೊಳಗೆ ಅಡಗಿಕೊಂಡಿದ್ದ ಅವರನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಪಾಂಪೋರ್ನ ಮೀಜ್ನಲ್ಲಿ ಸೆರೆಸಿಕ್ಕ ಮೂವರು ಉಗ್ರರನ್ನೂ ಹತ್ಯೆ ಮಾಡಿದಂತಾಗಿದೆ. ಇನ್ನು ಶೋಪಿಯಾನ್ ಜಿಲ್ಲೆಯ ಮುನಾಂದ್ ಪ್ರದೇಶದಲ್ಲಿ ಐವರು ಭಯೋತ್ಪಾದಕನನ್ನು ಕೊಲ್ಲಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








