ಯುವಜನತೆಗೆ 3 ವರ್ಷ ದೇಶ ಸೇವೆ ಮಾಡುವ ಅವಕಾಶ!!

ನವದೆಹಲಿ: 

      ಭಾರತೀಯ ಸೇನೆಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ. 

      ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಯುವಜನರಲ್ಲಿರುವ ದೇಶಭಕ್ತಿಯ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಸೇನೆಯು 3 ವರ್ಷಗಳ ಅವಧಿಗೆ ಸೇನಾಪಡೆಗಳ ಜೊತೆಗೆ ಪ್ರಾಯೋಗಿಕ ಅನುಭವ ಪಡೆಯಲು ಇಂಟರ್ನ್‌ಷಿಪ್‌ ಮೂಲಕ ಅವಕಾಶ ನೀಡಲು ನಿರ್ಧರಿಸಿದೆ.

      ಈ ಬಗ್ಗೆ ಮಾಹಿತಿ ನೀಡಿದ ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕರ್ನಲ್ ಅಮನ್ ಆನಂದ್, ಉನ್ನತ ಮಟ್ಟದಲ್ಲಿ ಟೂರ್ ಆಫ್ ಡ್ಯೂಟಿ ಪ್ರಸ್ತಾವನೆ ಮಾತುಕತೆ ಹಂತದಲ್ಲಿದ್ದು ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಇಲ್ಲಿ ಆಯ್ಕೆಯಾದ ಯುವಕ-ಯುವತಿಯರಿಗೆ ಆಯ್ಕೆ, ತರಬೇತಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ. ಉತ್ತಮ ತರಬೇತಿ ಪಡೆದ, 26/27 ನೇ ವಯಸ್ಸಿನಲ್ಲಿ ಶಿಸ್ತುಬದ್ಧ ಯುವಕರು ಒಂದು ವರ್ಷದ ತರಬೇತಿಯ ನಂತರ ಮತ್ತು ಮೂರು ವರ್ಷಗಳ ಟೂರ್ ಆಫ್ ಡ್ಯೂಟಿ ನಂತರ ಉತ್ತಮ ಸಂಬಳ ಪಡೆಯುತ್ತಾರೆ ಆದರೆ ಇವರಿಗೆ ಯಾವುದೇ ಪಿಂಚಣಿ ಮತ್ತು ಇತರ ಪ್ರಯೋಜನಗಳು ಸಿಗುವುದಿಲ್ಲ ಎಂದು ಹೇಳಿದರು.

      ಶೀಘ್ರದಲ್ಲಿಯೇ ನಡೆಯಲಿರುವ ಕಮಾಂಡರ್‌ಗಳ ಸಭೆಯಲ್ಲಿ ಈ ವಿಚಾರ ವಿವರವಾಗಿ ಚರ್ಚೆಯಾಗಲಿದೆ. ಆರಂಭದಲ್ಲಿ 100 ಅಧಿಕಾರಿಗಳು ಮತ್ತು 1000 ಯೋಧರಿಗೆ ಇಂಟರ್ನ್‌ಷಿಪ್‌ ಅವಕಾಶ ನೀಡಬೇಕೆಂಬ ಚಿಂತನೆಯಿದೆ’ ಎಂದು ಸೇನಾ ವಕ್ತಾರ ಕರ್ನಲ್  ಆನಂದ್ ತಿಳಿಸಿದ್ದಾರೆ.

      ಈ ಮೂಲಕ ಭಾರತೀಯ ಸೇನೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಿದೆ. ಈ ಯೋಜನೆಯನ್ನು ಸೀಮಿತ ಸಂಖ್ಯೆಯ ಖಾಲಿ ಹುದ್ದೆಗಳ ಮೂಲಕ ಪ್ರಯೋಗವಾಗಿ ಪ್ರಾರಂಭಿಸಬಹುದು. ಯಶಸ್ವಿಯಾದರೆ, ಹುದ್ದೆಗಳನ್ನು ಸಂಖ್ಯೆಯನ್ನು ಹೆಚ್ಚಿಸಬಹುದು ‘ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap