ಮಸೀದಿಯಲ್ಲಿ ಶೂಟೌಟ್ : ಕೂದಲೆಳೆಯಂತರದಲ್ಲಿ ಬಾಂಗ್ಲಾ ಕ್ರಿಕೆಟಿಗರು ಪಾರು!!

ಕ್ರೈಸ್ಟ್‌ಚರ್ಚ್:

      ನಾಳೆ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲೆಂಡ್ ಟೆಸ್ಟ್ ಪಂದ್ಯವನ್ನಾಡಬೇಕಾಗಿರುವ ಬಾಂಗ್ಲಾದೇಶ ತಂಡ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಪಾರಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಗಾರ ಮುಹಮ್ಮದ್ ಇಸಾಮ್ ಹೇಳಿದ್ದಾರೆ.

      ನ್ಯೂಝಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಜನ ಸಂದಣಿಯ ಮಸೀದಿಯಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಘಟನಾ ಸ್ಥಳದಲ್ಲಿದ್ದ ಬಾಂಗ್ಲಾದೇಶದ ಇಡೀ ಕ್ರಿಕೆಟ್ ತಂಡ ಯಾವುದೇ ಅಪಾಯವಿಲ್ಲದೆ ಪಾರಾಗಿದೆ ಎಂದು ವರದಿಯಾಗಿದೆ.

ಮಸೀದಿಯಲ್ಲಿ ಶೂಟೌಟ್ : 30 ಕ್ಕೂ ಹೆಚ್ಚು ಜನರ ದುರ್ಮರಣ!!!

      ಬಾಂಗ್ಲಾ ಆಟಗಾರರು ಮಸೀದಿಯೊಳಗೆ ಹೋಗಬೇಕೆನ್ನುವಷ್ಟರಲ್ಲಿ ಇಬ್ಬರು ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಾಂಗ್ಲಾ ದೇಶದ ಆಟಗಾರ ತಮೀಮ್ ಇಕ್ಬಾಲ್, ತಮಗಾದ ಭಯಂಕರ ಅನುಭವವನ್ನು ಹಂಚಿಕೊಂಡಿದ್ದು, ” ಇಡೀ ತಂಡ ಬಂದೂಕುಧಾರಿಗಳ ಗುಂಡಿನ ದಾಳಿಯಿಂದ ಪಾರಾಗಿದೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಸೇರಿಸಿಕೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.

      ಘಟನೆ ನಡೆದಾಗ ಬಾಂಗ್ಲಾದೇಶ ಕ್ರಿಕೆಟಿಗರು ಹೇಗ್ಲೇಯ್ ಪಾರ್ಕ್ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಬಾಂಗ್ಲಾ ಆಟಗಾರರು ಕ್ರೈಸ್ಟ್ ಚರ್ಚ್ ಗೆ ಆಗಮಿಸಿದ್ದರು. ಈ ದಾಳಿಯಿಂದ ಬಾಂಗ್ಲಾ ತಂಡಕ್ಕೆ ಯಾವುದೇ ಹಾನಿಯಾಗಿಲ್ಲ. ತಂಡ ಸುರಕ್ಷಿತವಾಗಿದೆ. ಇದೊಂದು ಭಯಾನಕ ಅನುಭವ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

      

Recent Articles

spot_img

Related Stories

Share via
Copy link