ಮಸೀದಿಯಲ್ಲಿ ಶೂಟೌಟ್ : 30 ಕ್ಕೂ ಹೆಚ್ಚು ಜನರ ದುರ್ಮರಣ!!!

ವಿಲ್ಲಿಂಗ್ಟನ್​:

    ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ವಿಕೃತಿ ಕೃತ್ಯ . ಅಲ್ಲಿನ ಮಸೀದಿಯೊಳಗೆ ನುಗ್ಗಿದ ವ್ಯಕ್ತಿ ಬಂದೂಕಿನಿಂದ ಮನಬಂದಂತೆ ಗುಂಡುಹಾರಿಸಿದ್ದು, ಸ್ಥಳದಲ್ಲೇ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

     ಸಾವಿನ ಸಂಖ್ಯೆ ಇನ್ನೂ ನಿಖರವಾಗಿಲ್ಲ. ಪೊಲೀಸರು ಶೂಟೌಟ್​ ನಡೆಸಿದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಇನ್ನಷ್ಟು ಬಂದೂಕುಧಾರಿಗಳು ಮಸೀದಿಯೊಳಗೆ ಇರಬಹುದೆಂದು ಶಂಕಿಸಲಾಗಿದೆ.

      ನ್ಯೂಜಿಲೆಂಡ್​ ಸ್ಥಳೀಯ ಕಾಲಮಾನ ಗುರುವಾರ ಬೆಳಗ್ಗೆ 8.40ಕ್ಕೆ ಘಟನೆ ನಡೆದಿದೆ. ಇದು ನ್ಯೂಜಿಲೆಂಡ್​ ಇತಿಹಾಸದಲ್ಲೇ ಕರಾಳದಿನ ಎಂದು ಪ್ರಧಾನಿ ಜಸಿಂದ ಅರ್ಡೆನ್​ ಅವರು ತಿಳಿಸಿದ್ದಾರೆ.

      ನ್ಯೂಜಿಲೆಂಡ್​ ಪೊಲೀಸ್​ ಆಯುಕ್ತರಾದ ಮೈಕ್​ ಬುಶ್​ ಅವರು ಘಟನೆ ಕುರಿತು ಒಂದು ವಿಡಿಯೊ ಪ್ರಕಟಿಸಿದ್ದು, ಸಾರ್ವಜನಿಕರು ಹೆದರದಂತೆ ಧೈರ್ಯ ಹೇಳಿದ್ದಾರೆ. ಈವರೆಗೆ ಒಬ್ಬ ಬಂದೂಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ. ಮಸೀದಿಯೊಳಗೆ ಇನ್ನೂ ಎಷ್ಟು ಜನ ದುಷ್ಕರ್ಮಿಗಳಿದ್ದಾರೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ತಹಬದಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

      ನ್ಯೂಜಿಲೆಂಡ್ ಪಾಲಿಗೆ ಇದೊಂದು ಕರಾಳ ದಿನ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ತಿಳಿಸಿದ್ದಾರೆ. ಕ್ರಿಸ್ಟ್‌ ಚರ್ಚ್ ಬಳಿ ಓರ್ವ ಗನ್‌ಮ್ಯಾನ್ 27ಕ್ಕೂ ಹೆಚ್ಚು ಅಮಾಯಕರನ್ನು ಶೂಟ್ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಇಂತಹ ಹಿಂಸಾಚಾರವನ್ನು ಹಿಂದೆಂದೂ ಕಂಡಿರಲಿಲ್ಲ. ಇದು ನ್ಯೂಜಿಲ್ಯಾಂಡ್ ಪಾಲಿಗೆ ಕರಾಳ ದಿನ ಎಂದು ಜಸಿಂಡಾ ಹೇಳಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap