ಬೆಂಗಳೂರು :
ನಟ ಚಿರಂಜೀವಿ ಸರ್ಜಾ ತಮ್ಮ ನಚ್ಚಿನ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ಮಣ್ಣಲ್ಲಿ ಮಣ್ಣಾದರು.
ಹೃದಯಾಘಾತಕ್ಕೆ ಒಳಗಾಗಿ ಭಾನುವಾರ (ಜೂ.7) ಕೊನೆಯುಸಿರೆಳೆದ ನಟ ಚಿರಂಜೀವಿ ಸರ್ಜಾ ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಇರುವ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಸಹೋದರನ ಅಂತ್ಯಕ್ರಿಯೆ ಮಾಡಬೇಕು ಎಂದು ಧ್ರುವ ಸರ್ಜಾ ಹಂಬಲಿಸಿದ್ದರು.
ಈ ಬಳಿಕ ಕುಟುಂಬಸ್ಥರು ನಿರ್ಧರಿಸಿದಂತೆ ಕನಕಪುರದ ಬಳಿಕ ಅವರ ನೆಚ್ಚಿನ ನೆಲಗುಳಿ ಫಾರ್ಮ್ ಹೌಸ್ ಗೆ ಅಂತಿಮ ಯಾತ್ರೆಯ ಮೂಲಕ ಕೊಂಡೊಯ್ಯಲಾಯಿತು. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ನಟ ಚಿರಂಜೀವಿ ಸರ್ಜಾ ಅವರ ತಂದೆ ನೆರವೇರಿಸುವ ಮೂಲಕ, ಮಣ್ಣು ಮಾಡಲಾಯಿತು. ಈ ಮೂಲಕ ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾದರು.
