ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ:ಶಿವಶಂಕರ್ ರೆಡ್ಡಿ

ಬೆಂಗಳೂರು

        ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿದ್ದು ರೈತರಿಕೆ ಕಡಿಮೆ ದರದಲ್ಲಿ ಅಧಿಕ ಇಳುವರಿಯ ಬೀಜಗಳನ್ನು ರೈತರಿಗೆ ಒದಗಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು.

        ನಗರದ ಜಿಕೆವಿಕೆ ಆವರಣದಲ್ಲಿ ನಡೆದ ರಾಷ್ಟ್ರೀಯ ಬೀಜ ಪ್ರಾಯೋಜನೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಬೀಜ ದಿನಾಚರಣೆ ಮತ್ತು ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾಋವೇ ಉತ್ತಮ ಇಳುವರಿ ಬೀಜೋತ್ಪಾದನೆ ಮಾಡಿ ಸಬ್ಸಿಡಿ ದರದಲ್ಲಿ ರೈತರಿಗೆ ತಲುಪಿಸಲಿದೆ ಎಂದರು.

       ಆದಿಕಾಲದಿಂದಲು ರೈತರು ಬೀಜೋತ್ಪಾದನೆ ಮಾಡಿಕೊಂಡು ಬಂದಿದ್ದಾರೆ ಉತ್ತಮ ಬೀಜಗಳನ್ನು ಉತ್ಪಾದನೆ ಮಾಡುವ ರೈತರನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು ಅಲ್ಲದೇ ಬೇರೆ ದೇಶಗಳ ಮಾದರಿಯಲ್ಲಿ ಬೀಜೋತ್ಪಾನೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು.ಎಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶ್ರಾಂತ ಕುಲಪತಿ ಆರ್.ನಾರಾಯಣ ಗೌಡ ಮಾತನಾಡಿ ಬೆಂ.ವಿವಿ ಬೀಜ ಉತ್ಪಾದನೆಯಲ್ಲಿ ಸಾಕಷ್ಟು ಸಾಧನೆ ಮಾಡಿದೆ ವಿವಿಯಿಂದ ರೈತರಿಗೆ ಬೀಜ ಒದಗಿಸಲು ಸಾಕಷ್ಟು ಅವಕಾಶವಿದೆ. ಉತ್ತಮ ತಳಿಯ ಬೀಜ ಒದಗಿಸುವುದರಿಂದ ಆರ್ಥಿಕ ವಾಗಿ ಸದೃಡರನ್ನಾಗಿ ಮಾಡಬಹುದಾಗಿದೆ ಎಂದರು.

      ಮುಂದುವರೆದ ರೈತರ ಬಳಕೆ ಮಾಡುವ ಮೂಲಕ ಬೀಜೋತ್ಪಾದನೆಯನ್ನು ದ್ವಿಗುಣಗೊಳಿಸಬಹುದಾಗಿದೆ.ಬೀಜಕ್ಕೆ ದುಪ್ಪಟ್ಟು ಬೆಲೆ ನೀಡುತ್ತಾರೆ. ಇದಕ್ಕೆ ಕಾರ್ಯಕ್ರಮ ರೂಪಿಸಬೇಕಾದ ಅವಶ್ಯಕತೆ ಇದೆ. ಅಗಸೆ ಬೀಜಕ್ಕೆ ಬಹಳಷ್ಟು ಬೇಡಿಕೆ ಇದೆ ಇದನ್ನು ಬೆಳೆಸಲು ರೈತರನ್ನು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಬೀಜ ವಿತರಣೆ ಮಾಡಬೇಕಿದೆ. ಮುಂದಿನದಿನಗಳಲ್ಲಿ ಸಾಧಾರಣ ರೈತರಿಗೆ ನೆರವಾಗಬಹುದಾಗಿದೆ ಎಂದು ತಿಳಿಸಿದರು.

      ಕೋಡಿಹಳ್ಳಿ ಚಂದ್ರಶೇಖರ್: ಬೀಜಗಳು ಖಾಸಗಿ ಕಂಪನಿಗೆ ಸೀಮಿತವಾಗಿತ್ತು. ಆದರೆ, ಇತ್ತೀಚಿಗೆ ವಿವಿಗಳು ಜನರ ನಡುವೆಗೆ ಕೈಚಾಚುತ್ತಿರುವುದು ಶ್ಲಾಘನೀಯ. ಮುಂದಿನ ತಲೆಮಾರಿಗೆ ಇಂದು ನಡೆಸುವ ಸಂಶೋಧನೆ ತಲುಪಬೇಕು. ಪಂಚಾಯಿತಿಗೊಂದು ಬೀಜಬ್ಯಾಂಕ್ ಸ್ಥಾಪನೆಯಾಗಬೇಕು. ರಾಣಿಬೆನ್ನೂರು, ಕುಷ್ಟಗಿ ಬಹಳ ಹೆಸರುವಾಸಿ.

       ಅತ್ಯಂತ ಸರಳವಾಗಿ ಮಾರುಕಟ್ಟೆ ಮಾಡುವ ಅವಶ್ಯಕತೆ ಇದೆ.ಎಪಿಎಂಪಿ ನಮ್ಮ ರೈತರ ಮಾರುಕಟ್ಟೆ ಅಲ್ಲ. ಮಾರಾಟ ಮಾಡುವವರ ಮಾರುಕಟ್ಟೆ. ನಮ್ಮದು ಅಂತ ರೈತರಿಗೆ ಮಾರುಕಟ್ಟೆ ಇಲ್ಲ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ ರೈತರಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣವಾಗಬೇಕೆಂದು ಮನವಿ ಮಾಡಿದರು.

       ಬೀಜ ಸಂರಕ್ಷಣೆಗೆ ಸುಧಾರಣೆ ತರುವ ನಿಟ್ಟಿನಲ್ಲಿ ಚರ್ಚಿಸಿ ಸಮಗ್ರ ವರದಿ ನೀಡಿದರೆ ಈ ನಿಟ್ಟಿನಲ್ಲಿ ಪರಾಮರ್ಶೆ ಮಾಡಿ ರೈತರಿಗೆ ಮುಟ್ಟುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.ಸಂಶೋಧನೆಗಳು ವಿವಿ ಯಲ್ಲಿ ಉಳಿದುಕೊಂಡಿವೆ. ಇದನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿ ಉತ್ತಮ ಮಾರುಕಟ್ಟೆ ಕಲ್ಪಿಸಿದಾಗ ರೈತ ಬೆಳೆಯುತ್ತಾನೆ. ಮಾರುಕಟ್ಟೆ ವ್ಯವಸ್ತೆ ಲೋಪಗಳನ್ನು ಸರಿಪಡಿಸುವತ್ತ ಗ ವ್ಯಯಮನ ಹರಿಸುತ್ತೇವೆ. ಉತ್ತಮಕಾರ್ಯಕ್ರಮಗಳನ್ನು ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ