ರಾಂಚಿ:
ಸಿಆರ್ ಪಿಎಫ್ ಯೋಧನೊಬ್ಬ ಗಾಯಗೊಂಡಿದ್ದ ನಕ್ಸಲ್‌ಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಸೈನಿಕರಿಗೂ ಮತ್ತು ನಕ್ಸಲರಿಗೂ ನಡೆದ ಗುಂಡಿನ ಚಕಮಕಿ ವೇಳೆ ನಕ್ಸಲ್‌ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ತುರ್ತು B+ ve ಗುಂಪಿನ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದಾಗ ಒಂದು ಕ್ಷಣ ಕೂಡ ಯೋಚಿಸದ ರಾಜ್ ಕಮಲ್ ತಾನು ರಕ್ತ ನೀಡುವುದಾಗಿ ಹೇಳಿದ್ದಾನೆ. ಎಂದು ಜಾರ್ಖಂಡ್ ವಲಯ ಸಿಆರ್ ಪಿಎಫ್ ಐಜಿಪಿ ಸಂಜಯ್ ಆನಂದಂ ಲತ್ಕರ್ ಹೇಳಿದ್ದಾರೆ.
ಜಾರ್ಖಂಡ್ ನ ಖುಂತಿ ಹಾಗೂ ವೆಸ್ಟ್ ಸಿಂಗ್ ಭೂಮ್ ಜಿಲ್ಲಾ ಗಡಿಯಲಿ 209 ಕೋಬ್ರಾ ಪಡೆ ಜನವರಿ 29ರೆಂದು ನಡೆಸಿದ್ದ ಎನ್‍ಕೌಂಟರ್ ನಲ್ಲಿ ನಕ್ಸಲ್‍ಗೆ ಗಾಯವಾಗಿತ್ತು. ಆ ವೇಳೆ ಭದ್ರತಾ ಪಡೆಯ ಯೋಧರೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಎನ್ ಕೌಂಟರ್ ವೇಳೆ ಐವರು ನಕ್ಸಲರು ಸತ್ತಿದ್ದರೆ ಇಬ್ಬರು ನಕ್ಸಲರು ಗಾಯಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ