ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ರಫೇಲ್ ಡೀಲ್ ಕುರಿತ ಸಿಎಜಿ ವರದಿ ಇಂದು ಸಂಸತ್ತಿನ ಎದುರು ಬರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ನಿರ್ಧಾರವನ್ನು ಮಾಡಿರುವವರೇ ಪೂರ್ವಗ್ರಹದಿಂದ ಕೂಡಿದ್ದಾರೆ. ಹಾಗಾಗಿ ಈ ವರದಿ ಮೌಲ್ಯ ರಹಿತ. ಎರಡನೆಯದಾಗಿ, ಇಲ್ಲಿ ಹಿತಾಸಕ್ತಿ ಸಂಘರ್ಷ ಎದ್ದು ಕಾಣುತ್ತಿದೆ. ಈ ಹಿಂದೆ ಅವರ ಸಮಾಲೋಚಕರಾಗಿದ್ದವರೇ ವರದಿ ತಯಾರಿಸಿದ್ದಾರೆ ಎಂದು ಆರೋಪಿಸಿದರು.
ಇಂದು ಸಂಸತ್ ಮುಂದೆ ಸಿಎಜಿ ವರದಿ ಮಂಡನೆಯಾಗುವುದರಿಂದ ಅದರಲ್ಲಿ ಏನಿರಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈಗಾಗಲೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿರಯಲ್ಲಿ ಅದರ ಉದ್ದೇಶವೇನೆಂಬುದು ತಿಳಿದುಬಂದಿದೆ. ರಫೇಲ್ ವಿಮಾನಗಳ ಬೆಲೆ ನಿಗದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದೇ ಅವರು ಹೇಳಿದ್ದಾರೆ. ಇದರಿಂದ ವರದಿಗೆ ಮೌಲ್ಯವಿಲ್ಲ ಎಂದರು.