ಮಧ್ಯಪ್ರದೇಶ :
ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ರಾಷ್ಟ್ರೀಯ ಹಾಕಿ ಆಟಗಾರರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಹೊಶಾಂಗಾಬದ್ ನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ದುರಂತದಲ್ಲಿ 4 ಮಂದಿ ಹಾಕಿ ಆಟಗಾರರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Madhya Pradesh: Four national level hockey players dead, three injured, in a car accident in Hoshangabad pic.twitter.com/otLiRNQzoQ
— ANI (@ANI) October 14, 2019
ಹಾಕಿ ಆಟಗಾರರು ಧ್ಯಾನ್ ಚಂದ್ ಟ್ರೂಫಿಯಲ್ಲಿ ಭಾಗವಹಿಸಲು ಹೊಶಂಗಾಬಾದ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯಪ್ರದೇಶದ ಹೊಶಾಂಗಬಾದ್ ನ ರಾಷ್ಟ್ರೀಯ ಹೆದ್ದಾರಿ 69 ರ ರೈಸಲಾ ಪುರ ದಲ್ಲಿ ದುರ್ಘಟನೆ ಸಂಭವಿಸಿದೆ.
ಮೃತ ಆಟಗಾರರನ್ನು ಇಂದೋರ್‍ನ ಶಹನಾವಾಜ್ ಖಾನ್, ಇಟಾರ್ಸಿಯ ಆದರ್ ಹರ್ದುವಾ, ಜಬ್ಬಲ್ಪುರದ ಆಶಿಶ್ ಲಾಲ್ ಮತ್ತು ಗ್ವಾಲಿಯರ್‍ನ ಅನಿಕೇತ್ ಎಂದು ಗುರುತಿಸಲಾಗಿದೆ. ನಾಲ್ವರೂ ಭೋಪಾಲ್‍ನ ಎಂಪಿ ಸ್ಪೋರ್ಟ್ಸ್ ಅಕಾಡೆಮಿಯ ಹಾಕಿ ಆಟಗಾರರು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ