ಗೋವಾದಲ್ಲಿ ಸಿಗುತ್ತೆ Free ಬಿಯರ್‌!!!

   ಗೋವಾದ ಬೀಚ್‌ಗಳಲ್ಲಿ ಈಗ ಕುಡಿದ್ರೇ 2 ಸಾವಿರ ರೂ. ಫೈನ್‌. ಆದ್ರೇ, ಬೀರ್‌ ಬಾಟಲ್‌ಗಳ ಕ್ಯಾಪ್‌ ಕ್ಲೀನ್‌ ಮಾಡಿದ್ರೇ ಫ್ರೀ ಬೀರ್ ಸಿಕ್ಕುತ್ತೆ. ಯಾರಿಗುಂಟು ಯಾರಿಗಿಲ್ಲ ಹೇಳಿ. ಮದ್ವೆಗೂ ಮೊದಲು ಪ್ರವಾಸ ತೆರಳಲು ಗೋವಾ ಹೇಳಿ ಮಾಡಿಸಿದ ತಾಣ. ಒಂದು ವರ್ಷಕ್ಕೆ 7 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಹಾಗೇ ಬಂದುಹೋಗುವ ವೇಳೆ ಪ್ರವಾಸಿಗರು ಕೊನೆಗೆ ಬೀಚ್‌ಗಳಲ್ಲಿ ಸಾಕಷ್ಟು ವೇಸ್ಟ್‌ಗಳನ್ನ ಎಸೆದೂ ಹೋಗ್ತಾರೆ. ಅದಕ್ಕಾಗಿ ಅಲ್ಲಿನ ಪ್ರವಾಸೋದ್ಯಮ ಕೈಗಾರಿಕೆ ಇಲಾಖೆ ಹಾಗೂ ಗೋ ಗ್ರೀನ್‌ನ ಸ್ಥಾಪಕ ದೃಷ್ಟಿ ಮರೈನ್‌ ಎಂಬುವರ ಜತೆಗೆ ಸೇರಿ ಬೀಚ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 

  ಇಲ್ಲಿ ಕಸ ಹೆಚ್ಚಾಗಬಾರದು ಅನ್ನೋ ಕಾರಣಕ್ಕೆ ಬಿಯರ್‌ನ ಎಕ್ಸಚೇಜ್‌ಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿಯೇ ‘ವೇಸ್ಟ್‌ ಬಾರ್‌’ಗಳನ್ನ  ಬೀಚ್‌ಗಳಲ್ಲಿ ಒಪನ್ ಮಾಡಲಾಗಿದೆ. 10 ಬೀರ್ ಬಾಟಲ್‌ಗಳ ಕ್ಯಾಪ್‌ ಕೊಟ್ರೇ ಒಂದು ಬಿಯರ್ ಬಾಟಲ್‌. 20 ಸಿಗರೇಟ್‌ ಖಾಲಿ ಪ್ಯಾಕ್‌ಗೂ ಬೀರ್ ಬಿಯರ್‌ ಸಿಗುತ್ತೆ. ಗೋವಾ ಬೀಚ್‌ಗಳಲ್ಲಿ ಎಕ್ಸ್‌ಚೇಂಜ್‌ಗೆ ಅವಕಾಶವಿದೆ.

   ಜನವರಿ 30ರಿಂದ ಈ ಯೋಜನೆ ಜಾರಿಗೆ ಬಂದಿದೆ. ಮೊದಲು ಬಾಗಾ ಬೀಚ್‌ನ ಜಂಜೀಬಾರ್‌ನಲ್ಲಿ ಇದನ್ನ ಪ್ರಯೋಗಿಸಲಾಯ್ತು. ‘ವೇಸ್ಟ್‌ ಬಾರ್‌’ನಲ್ಲಿ ವಿನ್-ವಿನ್‌ ಕಾನ್ಸೆಪ್ಟ್‌ ತರಲಾಯಿತು. ಬೀಚ್‌ಗಳಲ್ಲಿ ಈ ಪಾಸಿಟಿವ್‌ ಇವೆಂಟ್‌ ಜನರನ್ನ ಹೆಚ್ಚು ಆಕರ್ಷಿಸುತ್ತಿದೆ. ಗ್ರಾಹಕರು ಕೂಡ ಪರಿಸರ, ಸಮಾಜದಲ್ಲಿ ಸ್ವಚ್ಛತೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಹಾಗೇ ಫ್ರೀಯಾಗಿ ಬೀರ್‌ ಕೂಡ ಸಿಗುವುದರಿಂದ ಅವರು ಖುಷಿ ಖುಷಿಯಾಗಿರ್ತಾರೆ. ಈ ರೀತಿಯ ಗ್ರಾಹಕರನ್ನ ಇಲ್ಲಿ ನೋಡೋದೇ ನಮಗೂ ಸಂತೋಷ ಅಂತ ಈ ಅಭಿಯಾನದ ಭಾಗವಾಗಿರುವ ನೂರೇನ್‌ ವಾನ್‌ ಹೂಸ್ಟೇನ್‌ ಹೇಳ್ತಾರೆ.

   ಬರೀ ಸಿಗರೇಟ್‌ ಖಾಲಿ ಪ್ಯಾಕ್‌, ಬಾಟಲ್‌ ಕ್ಯಾಪ್‌ ಅಷ್ಟೇ ಅಲ್ಲ, ಬಳಸಿದ ಪ್ಲಾಸ್ಟಿಕ್‌ ಸ್ಟ್ರಾವ್‌ ಕೊಟ್ಟರೂ ಇಲ್ಲಿ ಕಾಕ್‌ಟೈಲ್‌ ಅಥವಾ ಚಿಲ್ಡ್‌ ಬೀರ್‌ ಸಿಗುತ್ತಂತೆ. ಇದು ಈಗಾಗಲೇ ಕ್ಲಿಕ್ ಆಗಿದ್ದು ಹೆಚ್ಚು ಹೆಚ್ಚು ಇಂಥ ವೇಸ್ಟ್‌ ಬಾರ್‌ಗಳನ್ನ ಬೀಚ್‌ಗಳಲ್ಲಿ ನಿರ್ಮಾಣ ಮಾಡೋದಾಗಿ ಅಲ್ಲಿನ ಗೋವಾ ಸರ್ಕಾರ ಹೇಳಿದೆ. ಟ್ವಿಟರ್‌ನಲ್ಲೂ #TeraMeraBeach ಅಂತ ಈ ಬಗ್ಗೆ ಅಭಿಯಾನವೂ ನಡೀತಿದೆ. ಗೋವಾ ಬೀಚ್‌ಗಳಲ್ಲಿ ತ್ಯಾಜ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ದುಡ್ಡು ಇಲ್ಲವಾ ತಲೆಕೆಡಿಸಿಕೊಳ್ಳಬೇಡಿ ಗೋವಾದಲ್ಲಿ ಪಾಪರಾಗಿದ್ದರೂ ನಿಮ್ಗೇ ಫ್ರೀ ಬೀರ್‌ಗಳು ಸಿಗುತ್ತೆ. ಹಾಗೇ ಈ ವಿನ್‌-ವಿನ್‌ ಇವೆಂಟ್‌ನಿಂದಾಗಿ ಪರಿಸರ ಹೇಗೆ ಉಳಿಸಬೇಕು ಅನ್ನೋದು ತಿಳಿಯುತ್ತೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ