ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ : ಮುಲಾಯಂ ಸಿಂಗ್

0
48

ನವದೆಹಲಿ: 

      ನರೇಂದ್ರ ಮೋದಿ ಅವರು ಮುಂದಿನ ಬಾರಿಯೂ ಪ್ರಧಾನಿಯಾಗಲಿ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಹಾರೈಸಿದ್ದಾರೆ. 

      16ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಅವರ ಈ ಮಾತು ಕೇಳಿದ ವಿರೋಧ ಪಕ್ಷಗಳ ಸದಸ್ಯರಿಗೆ ಅಚ್ಚರಿಯಾಯಿತು. ಆಡಳಿತ ಪಕ್ಷದ ಸದಸ್ಯರು ಮುಲಾಯಂ ಅವರ ಮಾತಿಗೆ ಮೇಜು ತಟ್ಟಿ ಸ್ವಾಗತಿಸಿದರು. ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದರು. ಮೋದಿ ಕೈಮುಗಿದು ನಮಿಸಿದರು.

      “ಪ್ರಧಾನಿ ಅವರು ಪ್ರತಿಯೊಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಯತ್ನಿಸುತ್ತಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಮತ್ತೊಮ್ಮೆ ಗೆದ್ದು ಬನ್ನಿರಿ. ನೀವು (ಮೋದಿ) ಮತ್ತೊಮ್ಮೆ ಪ್ರಧಾನಿ ಆಗಿ,”ಪಕ್ಕದಲ್ಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆಸೀನರಾಗಿದ್ದ ವೇಳೆ ಮುಲಾಯಂ ಅವರಿಂದ ಇಂತಾ ಮಾತು ಬಂದಿದ್ದು, ಅವರು ಸುಮ್ಮನೆ ಕೂತು ಮಾತು ಕೇಳಿಸಿಕೊಂಡಿದ್ದಾರೆ.

      ಅತ್ತ ವಿಪಕ್ಷಗಳೆಲ್ಲಾ ಒಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ನೋಡುತ್ತಿದ್ದರೆ ಇತ್ತ ಸಮಾಜವಾದಿ ಪಕ್ಷದ ವರಿಷ್ಠ ಮಲಾಯಂ ಸಿಂಗ್‌ ಯಾದವ್‌ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದನ್ನು ನೋಡಲು ಬಯಸಿರುವುದು, ಹಲವು ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here