ಜಿಸ್ಯಾಟ್-31 ಯಶಸ್ವಿ ಉಡಾವಣೆ : ಸಂವಹನ ಕ್ಷೇತ್ರದಲ್ಲಿ ಪ್ರಗತಿ!

ದೆಹಲಿ:Related image

     ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಬೆಳಗ್ಗಿನ ಜಾವ 2:31ಕ್ಕೆ ತನ್ನ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, 42 ನಿಮಿಷದಲ್ಲಿ ತನ್ನ ಕಕ್ಷೆ ಸೇರಿದೆ. 

      ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು ದೇಶದಲ್ಲಿ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ವಿಸ್ಯಾಟ್‌ ಸಂಪರ್ಕಕ್ಕೆ ಇದು ಅನುಕುಲಕರವಾಗಿರಲಿದೆ.  

       15 ವರ್ಷ ಇದರ ಆಯಸ್ಸು ಹೊಂದಿರುವ ಜಿಸ್ಯಾಟ್ -31 ಅಥವಾ ಜಿಯೊಸ್ಟೇಷನರಿ-31 2 ಸಾವಿರದ 535 ಕೆಜಿ ತೂಕವನ್ನು ಹೊಂದಿದ್ದು ಈಗಾಗಲೇ ಕಕ್ಷೆಯಲ್ಲಿರುವ ಕೆಲವು ಹಳೆಯ ಉಪಗ್ರಹಗಳನ್ನು ಇದು ಬದಲಾಯಿಸಲಿದೆ.

       ಪ್ರಸ್ತುತ ಜೀವಿತಾವಧಿಯ ಕೊನೆಯ ಹಂತದಲ್ಲಿರುವ ಇನ್ಸಾಟ್ 4 ಸಿಆರ್‌ಗೆ ಬದಲಿ ಉಪಗ್ರಹವಾಗಿ ಕೆಲಸ ಮಾಡಲಿದೆ. ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಬಹುಭಾಗವನ್ನು ವ್ಯಾಪಿಸುವಂತೆ ಸಂಕೇತಗಳನ್ನು ಬಿತ್ತರಿಸುವ ವೈಡ್ ಬ್ಯಾಂಡ್‌ ಟ್ರಾನ್ಸ್‌ಪಾಂಡರ್‌ ಅನ್ನು ಈ ಉಪಗ್ರಹದಲ್ಲಿ ಅಳವಡಿಸಲಾಗಿದೆ.

    ಮಾಸ್ಟರ್ ಕಂಟ್ರೋಲ್ ಸೌಲಭ್ಯವಿರುವ ಹಾಸನದ ಇಸ್ರೋದ ಕೇಂದ್ರದಲ್ಲಿ ಉಪಗ್ರಹವು ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿದೆ. ಈ ಉಪಗ್ರಹ ನೌಕೆಯಿಂದಾಗಿ ಸಂವಹನ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಗಮನಾರ್ಹ ಪ್ರಗತಿ ಕಾಣಲಿದೆ. ದ್ವೀಪ ಹಾಗೂ ಸಮುದ್ರದಂತಹ ಪ್ರದೇಶಗಳಲ್ಲಿ ಕೂಡಾ ಸಂವಹನಕ್ಕೆ ಈ ಉಪಗ್ರಹ ಸಹಕಾರಿಯಾಗಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap