ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು!!!

0
56

ನೇಪಿಯರ್:

     ಇಲ್ಲಿನ ಮೆಕ್‌ಲೀನ್ ಪಾರ್ಕ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ ಭರ್ಜರಿ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿ ಭರ್ಜರಿ ಗೆಲುವು ಸಾಧಿಸಿದೆ. 

     ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 8 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ.

      ಶಿಖರ್‌ ಧವನ್‌ ಅವರ ಅಜೇಯ 75 ರನ್‌, ವಿರಾಟ್‌ ಕೊಹ್ಲಿ ಅವರ 45 ರನ್‌ಗಳ ಬಲದಲ್ಲಿ ಭಾರತ ಕೇವಲ 34.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸುವ ಮೂಲಕ ಭರ್ಜರಿ ವಿಜಯವನ್ನು ದಾಖಲಿಸಿತು. 

      ಇಲ್ಲಿನ ಮೆಕ್‌ಲೀನ್‌ ಪಾರ್ಕ್‌ನಲ್ಲಿ  ಪ್ರವಾಸಿ ಭಾರತದ ವಿರುದ್ಧ ಇಂದು ನಡೆಯುತ್ತಿರುವ ಐದು ಪಂದ್ಯಗಳ ಸರಣಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆತಿಥೇಯ ನ್ಯೂಜೀಲ್ಯಾಂಡ್‌ ವಿರುದ್ಧದ ತಂಡ 38 ಓವರ್‌ಗಳಲ್ಲಿ, 3.18 ರನ್‌ ರೇಟ್‌ನಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆ ದುಕೊಂಡು ಕೇವಲ 157 ರನ್‌ ಕಲೆಹಾಕಿತ್ತು 

       ಬಲಿಷ್ಠ ಕಿವೀಸ್‌ ತಂಡವನ್ನು ಇಂದಿನ ಆಟದಲ್ಲಿ ಕಟ್ಟಿ ಹಾಕಿದ ಕುಲದೀಪ್‌ ಯಾದವ್‌ 39 ರನ್‌ ವೆಚ್ಚಕ್ಕೆ ನಾಲ್ಕು ವಿಕೆಟ್‌ ಕಿತ್ತರೆ ಮೊಹಮ್ಮದ್‌ ಶಮಿ ಕೇವಲ 19 ರನ್‌ ವೆಚ್ಚಕ್ಕೆ  3 ವಿಕೆಟ್‌ ಕಿತ್ತರು. ಉಳಿದಂತೆ ಯಜುವೇಂದ್ರ ಚಹಾಲ್‌ 2 ವಿಕೆಟ್‌ ಮತ್ತು ಕೇದಾರ್‌ ಜಾಧವ್‌ 1 ವಿಕೆಟ್‌ ಪಡೆದಿದ್ದರು. 

       ಕಿವೀಸ್‌ ಬ್ಯಾಟಿಂಗ್‌ನಲ್ಲಿ ನಾಯಕ ಕೇನ್‌ ವಿಲಿಯಮ್ಸ್‌ನ್‌ ಗರಿಷ್ಠ 64 ರನ್‌ ಬಾರಿಸಿದರು. ಉಳಿದಂತೆ ಗುಪ್‌ಟಿಲ್‌ 5 ರನ್‌, ಕಾಲಿನ್‌ ಮನ್ರೊ 8, ರಾಸ್‌ ಟೇಲರ್‌ 24, ಲ್ಯಾದಂ 11, ಹೆನ್ರಿ ನಿಕೋಲ್ಸ್‌ 12, ಮಿಚೆಲ್‌ ಸ್ಯಾಂಟ್‌ನರ್‌ 14, ಮತ್ತು ಡಫ್ ಬ್ರೇಸ್‌ವೆಲ್‌ 7 ರನ್‌ ಪಡೆದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
 

 

 

LEAVE A REPLY

Please enter your comment!
Please enter your name here