ಕೋಲಾರ:
ರಾಜ್ಯದ 25 ವರ್ಷದ ಯೋಧನೊಬ್ಬ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿರುವ ಘಟನೆ ಜಮ್ಮುಕಾಶ್ಮೀರದ ರಜೋರಿ ಪ್ರದೇಶದಲ್ಲಿ ನಡೆದಿದೆ.
ಕೋಲಾರದ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದ ಪ್ರಶಾಂತ್ (25) ಹುತಾತ್ಮ ಯೋಧ. ಮದ್ರಾಸ್ ಎಂಆರ್‍ಸಿ 17ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಶಾಂತ್ ನಿನ್ನೆ ಮೃತರಾಗಿದ್ದು, ಇಂದು ಸಂಜೆ ಅಥವಾ ನಾಳೆ ಇವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ.
ಯೋಧ ಪ್ರಶಾಂತ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇದ್ದು, ಯೋಧನ ಸಾವಿನ ಸುದ್ದಿಯಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
