ಮತ್ತೆ ಗರಿಗೆದರಿದ ಉಗ್ರರ ಅಟ್ಟಹಾಸ : ರೈಲಿನಲ್ಲಿ ಬಾಂಬ್ ಸ್ಫೋಟ!!!

ಕಾನ್ಪುರ:
       ಪುಲ್ವಾಮದಲ್ಲಿ ಕಾರ್ ಬಾಂಬ್ ಸ್ಫೋಟದ ಮೂಲಕ 44 ಯೋಧರ ಸಾವಿಗೆ ಕಾರಣವಾಗಿದ್ದ ಜೈಶ್ ಉಗ್ರ ಸಂಘಟನೆ ಇದೀಗ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಉಗ್ರರು ಕೈ ಹಾಕಿದ್ದಾರೆ.
 
     ಹೌದು, ರೈಲಿನಲ್ಲಿ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ವೊಂದು ಇಂದು ಸ್ಫೋಟವಾಗಿದ್ದು, ಇದರ ಹಿಂದೆ ಜೈಶ್ ಉಗ್ರ ಸಂಘಟನೆಯ ಕೈವಾಡವಿದೆ ಇದೆ ಎಂದು ಅನುಮಾನಿಸಲಾಗಿದೆ. 
      ಉತ್ತರ ಪ್ರದೇಶದ ಕಾನ್ಪುರದಿಂದ ಭಿವಾಂಡಿಗೆ ಹೊರಡಲು ಸಿದ್ಧವಾಗಿದ್ದ ಕಾಳಿಂದಿ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದರ ಶೌಚಾಲಯದಲ್ಲಿ ಈ ಸ್ಫೋಟ ಸಂಭವಿಸಿದೆ. ರೈಲಿನಲ್ಲಿ ಜೈಶ್ ಉಗ್ರ ಸಂಘಟನೆಯ ಕರಪತ್ರಗಳೂ ಕೂಡ ಸಿಕ್ಕಿದ್ದು, ಪತ್ರದಲ್ಲಿ ರೈಲು ಸ್ಫೋಟಿಸುವ ಮತ್ತು ವಿಧ್ವಂಸಕ ಕೃತ್ಯವೆಸಗುವ ಬೆದರಿಕೆ ಹಾಕಲಾಗಿದೆ. 
      ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈಲ್ವೆ ಪೊಲೀಸರು ರೈಲು ನಿಲ್ದಾಣಗಳಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರ ಬ್ಯಾಗ್ ಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಕಡಿಮೆ ತೀವ್ರತೆ ಸ್ಫೋಟವಾದ್ದರಿಂದ ಸಾವು-ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap