ಮತ್ತೊಂದು ಪ್ರಕರಣದಲ್ಲಿ ದುಬೈಯಿಂದ ಆಗಮಿಸಿದ ಸ್ಪೈಸ್ ಜೆಟ್ ವಿಮಾನದ ಕೊನೆಯ ಸೀಟ್‌ನ ಹಿಂಬದಿಯಲ್ಲಿದ್ದ ಸಿಕ್ನೆಸ್ ಬ್ಯಾಗ್‌ನಲ್ಲಿ 549.121 ಗ್ರಾಂ ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕರೆಲ್ಲರೂ ಇಳಿದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುವಾಗ ಈ ಚಿನ್ನ ಪತ್ತೆಯಾಗಿದೆ.
ಕಾಸರಗೋಡು ನಿವಾಸಿ ಅಬೂಬಕ್ಕರ್ ಮುಹಮ್ಮದ್ (46) ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಕಾಸರಗೋಡು ನಿವಾಸಿ ಒಳ ಉಡುಪಿನಲ್ಲಿ ಪೇಸ್ಟ್ ರೂಪದಲ್ಲಿ 9.80 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ರಾಸಾಯನಿಕ ವಸ್ತು ಬಳಸಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಇಡಲಾಗಿತ್ತು ಎನ್ನಲಾಗಿದೆ.