ಮುಂಬೈ:
ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಪ್ರಹಸನ ಅಂತ್ಯಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ನಾಲ್ವರು ಕಾಂಗ್ರೆಸ್ ಹಾಗೂ ಎನ್ಸಿಪಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
#Maharashtra: NCP's Vaibhav Pichad and Kalidas Kolambkar (who resigned from the MLA post & membership of Congress yesterday) submit their resignations from Assembly to Speaker of Maharashtra Legislative Assembly, Haribhau Bagade. pic.twitter.com/vsuu9Zgxcj
— ANI (@ANI) July 30, 2019
ಮೂವರು ಎನ್ ಸಿಪಿ ಶಾಸಕರು ಹಾಗೂ ಒಬ್ಬ ಕಾಂಗ್ರೆಸ್ ಶಾಸಕ ಮಂಗಳವಾರ ತಮ್ಮ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಹರಿಭಾವು ಬಗ್ಡೆ ಅವರಿಗೆ ಸಲ್ಲಿಸಿದ್ದಾರೆ.
ಎನ್‍ಸಿಪಿಯ ವೈಭವ್ ಪಿಚಾಡ್, ಸಂದೀಪ್ ನಾಯ್ಕ್, ಶಿವೇಂದ್ರ ಸಿನ್ಹ್ ಭೋಸಲೆ ಹಾಗೂ ಕಾಂಗ್ರೆಸ್ನ ಕಾಳಿದಾಸ್ ಕೊಲಾಂಬ್ಕರ್ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಹರಿಭಾವು ಬಗಾಡೆ ಅವರಿಗೆ ಸಲ್ಲಿಸಿದರು.
ಕಳೆದ ವಾರವಷ್ಟೇ ಎನ್‍ಸಿಪಿಯ ಮುಂಬೈ ಘಟಕದ ಅಧ್ಯಕ್ಷ ಸಚಿನ್ ಆಹಿರ್ ಪಕ್ಷ ತೊರೆದು ಶಿವಸೇನೆ ಸೇರಿದ್ದರು. ಎನ್‍ಸಿಪಿಯ ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ವಾಘ್ ಕೂಡ ಪಕ್ಷ ತೊರೆದಿದ್ದು, ಎಲ್ಲರೂ ನಾಳೆಯೇ ಬಿಜೆಪಿ ಸೇರಲಿದ್ದಾರೆಂಬ ಮಾಹಿತಿಯಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರುಗಳಾದ ಎನ್‍ಸಿಪಿಯ ಮಹಾರಾಷ್ಟ್ರ ಘಟಕ ಅಧ್ಯಕ್ಷ ಜಯಂತ್ ಪಾಟೀಲ್, ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ರೈತ ನಾಯಕ ರಾಜು ಶೆಟ್ಟಿ ಮುಂಬೈಯಲ್ಲಿ ಚರ್ಚೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ