ಶೋಭಾ ಕರಂದ್ಲಾಜೆ ಅಕೌಂಟ್ ಹ್ಯಾಕ್ : 20 ಲಕ್ಷ ರೂ. ಕನ್ನ!!!

0
69

 ದೆಹಲಿ :

      ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್​ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಇಂದು ತಡವಾಗಿ ಬೆಳಕಿಗೆ ಬಂದಿದೆ.

      ಪ್ರತಿಯೊಬ್ಬ ಸಂಸದರಿಗೂ ಸಂಸತ್​ ಭವನ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇತರೆ ಭತ್ಯೆಗಳು ನೇರವಾಗಿ ಈ ಬ್ಯಾಂಕಿನ ಖಾತೆಗೆ ಸಂದಾಯವಾಗುತ್ತದೆ. ಹಲವು ಸಂಸದರು ಈ ಖಾತೆಗೆ ಬರುವ ಹಣವನ್ನು ಎಷ್ಟೋ ವರ್ಷಗಳವರೆಗೂ ಬಳಸಿಕೊಳ್ಳದೆ ಹಾಗೆ ಬಿಟ್ಟಿರುತ್ತಾರೆ.

     ಶೋಭಾ ಅವರು ಮೊಬೈಲ್​​ನಿಂದ ತಮ್ಮ ನೆಟ್​ ಬ್ಯಾಂಕಿಂಗ್​ ಖಾತೆಯನ್ನು ನಿರ್ವಹಿಸುವಾಗ ಹ್ಯಾಕ್​ ಮಾಡಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.  ಹ್ಯಾಕ್​ ಆಗಿರುವುದನ್ನು ಸ್ವತಃ ಕರಂದ್ಲಾಜೆ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಿಷಯ ದೊಡ್ಡದು ಮಾಡಲು ಇಷ್ಟವಿಲ್ಲ ಎಂದು ಹೇಳಿ, ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.

       ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

LEAVE A REPLY

Please enter your comment!
Please enter your name here