ನಾಯಿಗೆ ಕ್ಷಮೆ ಕೇಳದಿದ್ದಕ್ಕೆ ಹತ್ಯೆ..!!!

ಹೊಸದಿಲ್ಲಿ:

ಮಧ್ಯರಾತ್ರಿ   ರಸ್ತೆಯಲ್ಲಿ ಯಾರು ಇಲ್ಲದ ವೇಲೆ . ಮಿನಿ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ ವಿಜೇಂದರ್  ಎಂಬಾತ ವಾಹನವನ್ನು ಪಾರ್ಕ್ ಮಾಡಿ ಮನೆ ಸೇರುವ ಬರದಲ್ಲಿದ್ದು . ಅಷ್ಟರಲ್ಲಿ ಅವನ ವಾಹನ ಅಲ್ಲೇ ಕುಳಿತಿದ್ದ ಕಪ್ಪು ಲ್ಯಾಬ್ರಡಾರ್ ನಾಯಿಗೆ ಸ್ವಲ್ಪ ತಾಗಿದೆ.ಭಯದಿಂದ ನಾಯಿ ಆತನನ್ನು ನೋಡಿ ಬೊಗಳಲು ಪ್ರಾರಂಭಿಸಿದೆ

 ಕೆಲ ನಿಮಿಷದ ಬಳಿಕ ವಿಜೇಂದರ್ (40) ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನಿಗೆ ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ತಿವಿದು ಹತ್ಯೆಯೈಯ್ಯಲಾಗಿತ್ತು. ನಾಯಿ ಬಳಿ ಕ್ಷಮೆ ಕೇಳಲಿಲ್ಲವೆಂಬ ಕಾರಣಕ್ಕೆ ಆತನ ಜೀವವನ್ನೇ ತೆಗೆಯಲಾಗಿತ್ತು.

ಹೌದು, ರಾಷ್ಟ್ರ ರಾಜಧಾನಿಯ ರಸ್ತೆ ಮತ್ತೊಂದು ದುರಂತಕ್ಕೆ ಸಾಕ್ಷಿಯಾಯಿತು. ಜೀವನಾಧಾರವಾಗಿದ್ದ ಜೀವವೊಂದನ್ನು ಕಳೆದುಕೊಂಡರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಆರೋಪಿಗಳನ್ನು ಸಹೋದರರಾದ ಅಂಕಿತ್, ಪರಾಸ್ ಮತ್ತು ಅವರ ಮನೆ ಬಾಡಿಗೆದಾರ ದೇವ್ ಚೋಪ್ರಾ ಎಂದು ಗುರುತಿಸಲಾಗಿದೆ.

10ಜನ ಸದಸ್ಯರ ಕುಟುಂಬವೊಂದು  ಈ ಕೃತ್ಯವನ್ನು ಎಸಗಿದ್ದಾರೆ .ನೈರುತ್ಯ ದೆಹಲಿಯ ಉತ್ತಮ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಶನಿವಾರ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ಘಟನೆಯಲ್ಲಿ ವಿಜೇಂದರ್ ಸಾವನ್ನಪ್ಪಿದರೆ, ಆತನ ಸಹೋದರ ರಾಜೇಶ್ ರಾಣಾ(45) ಆಸ್ಪತ್ರೆ ಪಾಲಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link