ನವದೆಹಲಿ:
ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ ಮತ ಹಾಕಿದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಬುಲಂದ್ ಶಹರ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಭೋಲಾ ಸಿಂಗ್ ಮತ್ತು ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ ವರ್ಮಾ ಕಣದಲ್ಲಿದ್ದಾರೆ. ಈ ಇಬ್ಬರ ನಡುವೇ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಈ ಸಲ ಬಿಎಸ್ಪಿಯನ್ನು ಗೆಲ್ಲಿಸಲೇಬೇಕೆಂದು ಹೊರಟ 25 ವರ್ಷದ ಯುವಕ ಪವನ್ ಕುಮಾರ್ ಮತದಾನ ಹಕ್ಕು ಚಲಾಯಿಸಲು ಹೋಗಿದ್ದಾನೆ. ವರ್ಮಾ ಪರವಾಗಿ ಮತ ಹಾಕಲು ತೆರಳಿದ ಪವನ್ ತಪ್ಪಾಗಿ ಬಿಜೆಪಿಗೆ ಮತ ಚಲಾಯಿಸಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.
ತನ್ನ ತಪ್ಪಿನ ಅರಿವಾಗಿ ಮನೆಗೆ ಬಂದ ಕೂಡಲೇ ಚಾಕು ತೆಗೆದುಕೊಂಡು ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ಬೆರಳನ್ನು ಕತ್ತರಿಸಿಕೊಂಡಿದ್ದ ವಿಡಿಯೋವನ್ನು ಪವನ್ ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಯಾಕಾಗಿ ತನ್ನ ಬೆರಳನ್ನು ಕತ್ತರಿಸಿಕೊಂಡೆ ಎಂಬುದನ್ನು ಅಲ್ಲಿಯೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ. ತನ್ನ ತಪ್ಪಿನ ಪ್ರಯಾಶ್ಚಿತ್ತಕ್ಕಾಗಿ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.
A youth in Abdullapur Hulaspur village in UP's Bulandshahr severed his own finger for accidently voting BJP instead of BSP. pic.twitter.com/zXq9LwOOH3
— Piyush Rai (@Benarasiyaa) April 18, 2019
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ