ಬೆಂಗಳೂರು:
ಐತಿಹಾಸಿಕ ಬೆಂಗಳೂರು ಕರಗದ ಪೂರ್ವಭಾವಿ ಧಾರ್ವಿುಕ ಕಾರ್ಯಕ್ರಮಗಳಿಗೆ ಗುರುವಾರ ರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಚೈತ್ರ ಶುಕ್ಲ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ನಡೆಯಲಿರುವ ಉತ್ಸವಕ್ಕೆ ರಥೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಮುಂದಿನ 10 ದಿನ ಅಂದರೆ ಏ. 21ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಏ. 19ರ ಮಧ್ಯರಾತ್ರಿ 12 ಗಂಟೆಗೆ ಕರಗ ಶಕ್ಱೋತ್ಸವ ನಡೆಯಲಿದೆ. ಈ ಬಾರಿ ಅರ್ಚಕ ಎನ್. ಮನು ಕರಗವನ್ನು ಹೊತ್ತು ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸಲಿದ್ದಾರೆ. ಶಕ್ಱೋತ್ಸವದ ನಂತರದ 2 ದಿನ ಧಾರ್ವಿುಕ ಕಾರ್ಯಕ್ರಮಗಳು ನಡೆದು, ಧ್ವಜಾವರೋಹಣ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಕರಗ ಮಹೋತ್ಸವದ 2ನೇ ದಿನವಾದ ಶುಕ್ರವಾರ ಕಬ್ಬನ್ ಉದ್ಯಾನದಲ್ಲಿನ ಕರಗದ ಕುಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರ ಜತೆಗೆ ಗಂಗಾ ಪೂಜೆಯನ್ನು ನಡೆಸಲಾಗುತ್ತದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
