
ಸಮಾರಂಭದ ಅತಿಥಿಗಳಾಗಿ ನಟ ಅನಂತ್ನಾಗ್ ಹಾಗೂ ಬಾಲಿವುಡ್ ನಿರ್ಮಾಪಕ /ನಿರ್ದೇಶಕ ರಾಹುಲ್ ರವೈಲ್ ಆಗಮಿಸಲಿದ್ದಾರೆ. ಇದೇ ತಿಂಗಳ 28ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಸುಮಾರು 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನವಾಗಲಿವೆ ಎಂದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಪ್ರಕೃತಿ ವಿಕೋಪ ಕೇಂದ್ರೀಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ.
ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ನಟನೆಯ ನಾಗರಹಾವು, ಏಳು ಸುತ್ತಿನ ಕೋಟೆ, ಅಂತ, ಪಡುವಾರಳ್ಳಿ ಪಾಂಡವರು, ಶುಭಮಂಗಳ , ರಂಗನಾಯಕಿ ಚಿತ್ರಗಳು, ಲೋಕನಾಥ್ ಎಂ.ಎನ್. ವ್ಯಾಸರಾವ್ ಹಾಗೂ ಮೃಣಾಲ್ ಸೇನ್ ಅಭಿನಯದ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ. ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಕುರಿತ ಕಿರುಚಿತ್ರ ಕೂಡಾ ಪ್ರದರ್ಶನವಾಗಲಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿನ ಓರಾಯನ್ ಮಾಲ್ನ 11 ಸ್ಕ್ರೀನ್ಗಳಲ್ಲಿ ಹಾಗೂ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಚಲನಚಿತ್ರೋತ್ಸವದ ದರ ಕಳೆದ ಬಾರಿಗಿಂತ ಈ ಬಾರಿ ಅಗ್ಗವಾಗಿದೆ. ಸಾರ್ವಜನಿಕರಿಗೆ 8 ದಿನಗಳಿಗೆ ಪ್ರತಿ ಟಿಕೆಟ್ ದರ 800 ರೂಪಾಯಿ ನಿಗದಿಯಾಗಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಹಾಗೂ ಚಿತ್ರೋದ್ಯಮದ ಸದಸ್ಯರಿಗೆ 400 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
